ಆಲ್ಬರ್ಟ್ ಐನ್‌ಸ್ಟೀನ್ ಅವರ ಈ ಹೇಳಿಕೆ ಸರಿಯಾಗಿತ್ತು-

"ಯಾವ ಮಹಿಳೆ ಜನಜಂಗುಳಿಯನ್ನು ಹಿಂಬಾಲಿಸುತ್ತಾಳೋ, ಅವಳು ಸಾಮಾನ್ಯವಾಗಿ ಜನಜಂಗುಳಿಯಾಚೆ ಹೋಗಲಾರಳು. ಯಾವ ಮಹಿಳೆಯು ಒಬ್ಬಂಟಿಯಾಗಿ ಮುನ್ನುಗ್ಗುತ್ತಾಳೋ, ಅವಳು ಯಾರಿಗೂ ನಿಲುಕದ ಜಾಗಗಳಿಗೆ ಹೆಜ್ಜೆಯಿಡುತ್ತಾಳೆ."

ಮಹಿಳಾ ಉದ್ಯಮಿಗಳು ಇಂದಿನ ಕಾರ್ಪೊರೇಟ್ ಪ್ರಪಂಚದ ಅವಿಭಾಜ್ಯ ಅಂಗವಾಗಿದ್ದಾರೆ. ಅವರು ತಾಯ್ತನ ಮತ್ತು ಉದ್ಯಮಶೀಲತೆ ಎರಡನ್ನೂ ಸಂಭಾಳಿಸುವುದಷ್ಟೇ ಅಲ್ಲ, ಅವರು ಬಹುತೇಕ ಅರ್ಧದಷ್ಟು ಬಿಸಿನೆಸ್‌ಗಳ ಮಾಲೀಕರಾಗಿದ್ದಾರೆ. ಇಂದು ಹೆಚ್ಚೆಚ್ಚು ಮಹಿಳೆಯರು ಸಾಂಪ್ರದಾಯಿಕವಾದ, ತಮಗೆ ಸೀಮಿತವಾಗಿದ್ದ ಸ್ಥಾನಗಳಿಂದ ಹೊರಬಂದು ಬಿಸಿನೆಸ್ ಜಗತ್ತಿಗೆ ಕಾಲಿಡುತ್ತಿದ್ದಾರೆ. ಕಳೆದ ದಶಕದಲ್ಲಿ, ಮಹಿಳಾ ಉದ್ಯಮಗಳ ಸಂಖ್ಯೆಯಲ್ಲಿ ಮತ್ತು ಅವರ ತೊಡಗಿಕೆಗಳ ಗೆಲುವಿನ ದರದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಉದ್ಯಮಶೀಲತೆಯ ವಲಯದಲ್ಲಿ ಹತ್ತು ವರ್ಷಗಳ ಹಿಂದೆ ಅಲ್ಪಸಂಖ್ಯಾತರಾಗಿದ್ದ ಮಹಿಳೆಯರು, ಇಂದು ಜಗತ್ತಿನ ಒಟ್ಟು ಉದ್ಯಮಿಗಳಲ್ಲಿ 37% ಪ್ರಮಾಣವನ್ನು ಹೊಂದಿದ್ದಾರೆ. 126 ಮಿಲಿಯನ್‌ನಷ್ಟು ಮಹಿಳೆಯರು ಈಗಾಗಲೇ ತಮ್ಮ ಬಿಸಿನೆಸ್ ಅನ್ನು ಆರಂಭಿಸಿದ್ದಾರೆ ಅಥವಾ ಮುನ್ನಡೆಸುತ್ತಿದ್ದಾರೆ, ಮತ್ತು 98 ಮಿಲಿಯನ್‌ನಷ್ಟು ಮಹಿಳೆಯರು ಈಗಾಗಲೇ ಸ್ಥಾಪಿತವಾದ(ಮೂರುವರೆ ವರ್ಷ ಮೀರಿದ) ಬಿಸಿನೆಸ್‌ಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ಇತ್ತೀಚಿನ ಜಾಗತಿಕ ಉದ್ಯಮಶೀಲತೆ ಮಾನಿಟರ್ (GEM)ಅವರು ಕಂಡುಹಿಡಿದಿದ್ದಾರೆ. ಹೀಗೆ ಜಾಗತಿಕ ಅರ್ಥವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಮಹಿಳೆಯರ ಸಂಖ್ಯೆ 224 ಮಿಲಿಯನ್ ಆಗುತ್ತದೆ- ಇದು ವರ್ಲ್ಡ್ ಬ್ಯಾಂಕ್ ಗುರುತಿಸಿರುವ 188 ರಾಷ್ಟ್ರಗಳಲ್ಲಿನ 67 ರಾಷ್ಟ್ರಗಳ ಡೇಟಾ ಮಾತ್ರ ಆಗಿರುತ್ತದೆ.

ಕೆಲಸದ ಬಗ್ಗೆ ಮಹಿಳೆಗೆ ತನಗಿರುವ ಅಪಾರವಾದ ಹುಮ್ಮಸ್ಸೇ, ಅವಳು ಉದ್ಯಮಶೀಲತೆಯನ್ನು ಆಯ್ಕೆ ಮಾಡಲು ಕಾರಣವಾಗಿದೆ. ಮಹಿಳಾ ಉದ್ಯಮಿಗಳಿಗೆ ಹತೋಟಿಗಾಗಿ ಇರುವ ಹಂಬಲವು ಇನ್ನೊಂದು ಸ್ಫೂರ್ತಿದಾಯಕ ಸಂಗತಿಯಾಗಿದೆ. ತಮ್ಮ ಉದ್ಯಮಕ್ಕೆ ತಾವೇ ಒಡೆಯರಾಗುವ ಮತ್ತು ತಮ್ಮದೇ ಕಂಪನಿಯನ್ನು ಮುನ್ನಡೆಸುವ ಕಲ್ಪನೆಗೆ ಮಹಿಳಾ ಉದ್ಯಮಿಗಳು ಆಕರ್ಷಿತರಾಗಿದ್ದಾರೆ, ಇಂತಹ ಅವಕಾಶವು ಅವರು ಬೇರೆ ಕಂಪನಿಗೆ ದುಡಿಯುತ್ತಿದ್ದರೆ ಸಿಗುವುದಿಲ್ಲ. ಹಣಕಾಸಿನ ಲಾಭವು ಅವರ ಮೊದಲ ಗುರಿ ಆಗಿರುವುದಿಲ್ಲ , ಆದರೆ ವೈಯಕ್ತಿಕ ತೃಪ್ತಿ ಮತ್ತು ಸಮುದಾಯದ ಪಾಲ್ಗೊಳ್ಳಿಕೆ ಆಗಿರುತ್ತದೆ. ಇನ್ನೊಂದು ಸ್ಪೂರ್ತಿದಾಯಕ ಸಂಗತಿಯನ್ನು ಮಹಿಳಾ ಉದ್ಯಮಿಗಳು ಹಂಚಿಕೊಳ್ಳುವುದು ಏನೆಂದರೆ, ಅವರು ಒಂದೇ ಸಮಯಕ್ಕೆ ಹಲವು ಕಾರ್ಯಗಳನ್ನು ಮಾಡಬಲ್ಲವರು ಮತ್ತು ಕುಟುಂಬ ಹಾಗೂ ವೃತ್ತಿಬದುಕನ್ನು ತಮ್ಮ ಗುರಿ-ಆಧಾರಿತ ಪದ್ಧತಿಯಿಂದ ನಿಭಾಯಿಸಬಲ್ಲವರಾಗಿರುತ್ತಾರೆ.

ಮಹಿಳೆಯರು ಈಗ ಎಲ್ಲಾ ಕ್ಷೇತ್ರಗಳಲ್ಲಿ ಪುರುಷರನ್ನು ಮೀರಿಸುತ್ತಿದ್ದಾರೆ. ಶಿಕ್ಷಣಕ್ಕೆ ಬಂದಾಗ ಕಂಡುಬರುವುದೇನೆಂದರೆ, ಅನೇಕ ಯಶಸ್ವಿ ಮಹಿಳಾ ಉದ್ಯಮಿಗಳು ಉನ್ನತ ಶಿಕ್ಷಣವನ್ನು ಮಾಡಿರುವ ಪ್ರಮುಖ ಅಂಶವು ಸಾಮಾನ್ಯವಾಗಿ ಕಂಡುಬರುತ್ತದೆ. ಮಹಿಳಾ ಉದ್ಯಮಿಗಳು ತಮ್ಮ ಉದ್ಯೋಗಿಗಳಿಗೆ ಹೆಚ್ಚಿನ ಹೆಲ್ತ್ ಕೇರ್ ಲಾಭಗಳನ್ನು, ಉದ್ಯೋಗ-ಸಮಯದ ತರಬೇತಿ ಮತ್ತು ಶಿಕ್ಷಣ, ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಣ ಮುಂದುವರೆಸುತ್ತಿರುವ ಉದ್ಯೋಗಿಗಳಿಗೆ ಟ್ಯೂಶನ್ ಹಿಂಪಾವತಿ, ಹೆಚ್ಚು ರಜೆಗಳನ್ನು ಮತ್ತು ಪೇಯ್ಡ್ ರಜೆಗಳನ್ನು ತಮ್ಮ ಉದ್ಯೋಗಿಗಳಿಗೆ ಒದಗಿಸುವುದರಿಂದಾಗಿ, ಸಂಸ್ಥೆಯ ಅಭಿವೃದ್ಧಿಗೆ ಕಾರಣವಾಗುವುದು.

ಮಹಿಳಾ ಉದ್ಯಮಿಗಳು ಗುಂಪುಗಳಾಗಿ ಅಥವಾ ಒಕ್ಕೂಟವಾಗಿ ತಾವಾಗಿಯೇ ಕೂಡುತ್ತಿದ್ದಾರೆ. ಗಟ್ಟಿಯಾದ ಮಹಿಳಾ ನೆಟ್ವರ್ಕ್‌ಗಳನ್ನು ಸ್ಥಾಪಿಸುವ ಆಕಾಂಕ್ಷೆ ಮತ್ತು ಅಲ್ಲಿ ಸದಸ್ಯರು ಒಟ್ಟಾಗಿ ಸಂಪನ್ಮೂಲಗಳನ್ನು ಮತ್ತು ಪರಿಣಿತಿಗಳನ್ನು ಸಂಗ್ರಹಿಸುವುದು ಈ ಪ್ರವೃತ್ತಿಗೆ ಕಾರಣವಾಗಿದೆ. ಅಷ್ಟೇ ಅಲ್ಲದೆ, ಸರಕಾರಿ ಯೋಜನೆಗಳು ಮತ್ತು ಭಾರತದ ಮಹಿಳಾ ಉದ್ಯಮಿಗಳ ಒಕ್ಕೂಟಗಳಂತಹ ಹಲವಾರು ಮಹಿಳಾ ಉದ್ಯಮಿ ಸಂಘಗಳು, ಉದ್ಯಮಶೀಲತೆ ವಲಯಕ್ಕೆ ಕಾಲಿಡಲು ಹಲವಾರು ಪ್ರೋತ್ಸಾಹಕಗಳನ್ನು ಮತ್ತು ಸಂಪನ್ಮೂಲಗಳನ್ನು ಒದಗಿಸುವಲ್ಲಿ ಕಾರಣಕರ್ತರಾಗಿದ್ದಾರೆ. ಯಾವ ರಾಜ್ಯಗಳು ಹೆಚ್ಚು ಸಾಕ್ಷರತೆ ಪ್ರಮಾಣವನ್ನು ಹೊಂದಿವೆಯೋ ಅವು, ಹೆಚ್ಚಿನ ಸಂಖ್ಯೆಯ ಮಹಿಳಾ ಉದ್ಯಮಿಗಳನ್ನೂ ಹೊಂದಿರುವುದು ಕಾಕತಾಳೀಯವಲ್ಲ. ವಾಸ್ತವವಾಗಿ, ದಕ್ಷಿಣ ಭಾರತದ ನಾಲ್ಕೂ ರಾಜ್ಯಗಳನ್ನು ಮತ್ತು ಮಹಾರಾಷ್ಟ್ರವನ್ನು ಸೇರಿಸಿದರೆ ಭಾರತದ ಮಹಿಳಾ ಉದ್ಯಮಿ ಸಣ್ಣ ಕೈಗಾರಿಕೆ ಘಟಕಗಳು 50% ನಷ್ಟು ಇವೆ.

 

 

ಮಹಿಳಾ ಉದ್ಯಮಶೀಲತೆ ಮತ್ತು ಮಹಿಳಾ ಬಿಸಿನೆಸ್ ನೆಟ್ವರ್ಕ್ ರಚನೆಗಳಲ್ಲಿ ಏರಿಕೆ ಕಂಡುಬರುತ್ತಿದ್ದರೂ, ಇನ್ನೂ ಅನೇಕ ಮಹಿಳಾ ಉದ್ಯಮಿಗಳು ತಮ್ಮ ಒಳ್ಳೆಯ ಬಿಸಿನೆಸ್ ಕಲ್ಪನೆಗಳನ್ನು ಜಾರಿಗೆ ತರುವಲ್ಲಿ ಹಿಂದೆ ಬೀಳುತ್ತಾರೆ. ಸ್ಟಾರ್ಟಪ್‌ಗಳ ಸಾಲದ ಸಮಸ್ಯೆಗಳಿಗೆ ಹೆದರಿ ಅನೇಕ ಕನಸಿನ ಮಹಿಳಾ ಉದ್ಯಮಿಗಳು ಹಿಂಜರಿಯಬಹುದು. ಮಾಹಿತಿ ತಂತ್ರಜ್ಞಾನ ಮತ್ತು ವ್ಯವಹಾರ ಕೌಶಲ್ಯಗಳಲ್ಲಿ ಅವರ ತಿಳುವಳಿಕೆಯ ಕೊರತೆಯು ಅವರ ಎರಡನೇ ಸವಾಲು ಆಗಿರಬಹುದು.

ಮಹಿಳಾ ಉದ್ಯಮಿಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ, ಅವರಿಗೆ ಮುಂದಿನ ದಿನಗಳು ಉತ್ತಮವಾಗಿರುತ್ತವೆ ಎಂದು ಭವಿಷ್ಯ ನುಡಿಯಲಾಗಿದೆ. ಅನೇಕ ಯಶಸ್ವಿ ಬಿಸಿನೆಸ್ ಸಂಸ್ಥೆಗಳು ಐಟಿಗೆ ಸಂಬಂಧಪಟ್ಟಿದವು ಆಗಿದ್ದರೂ, ಅನೇಕ ಇತರ ಉದ್ಯಮಗಳು ಅಸ್ತಿತ್ವದಲ್ಲಿವೆ ಮತ್ತು ಬೆಳವಣಿಗೆ ಕಾಣುತ್ತಿವೆ. ಅನುಭವವು ಯಾವಾಗಲೂ ಪ್ರಯೋಜನಕಾರಿಯಾಗಿರುತ್ತದೆ; ಆದಾಗ್ಯೂ, ಒಬ್ಬರು ತಮ್ಮ ಉದ್ಯಮ, ಅವರ ಗ್ರಾಹಕರ ಮೂಲ ಮತ್ತು ಪ್ರತಿಸ್ಪರ್ಧಿಗಳ ಮೇಲೆ ಸಾಕಷ್ಟು ಸಂಶೋಧನೆಯನ್ನು ನಡೆಸಬೇಕು ಮತ್ತು ಈಗಾಗಲೇ ಪ್ರಕ್ರಿಯೆಯನ್ನು ನೋಡಿದ ಉದ್ಯಮಿಗಳೊಂದಿಗೆ ಮಾತನಾಡಬೇಕು. ಅಷ್ಟೇ ಅಲ್ಲದೆ, ಇಂತಹ ಹಲವಾರು ಒಕ್ಕೂಟಗಳನ್ನು ಮಹಿಳಾ ಪ್ರತಿನಿಧಿಗಳಲ್ಲಿ ರಚಿಸಲಾಗುವುದು, ಇದರಿಂದಾಗಿ ಬಿಸಿನೆಸ್ ಜಗತ್ತಿನಲ್ಲಿ ಮಹಿಳಾ ಬಿಸಿನೆಸ್ ನೆಟ್ವರ್ಕನ್ನು ಸ್ಥಾಪಿಸಲು ಸಹಾಯವಾಗುತ್ತದೆ.

ಉದ್ಯಮಶೀಲತೆಯು ಒಂದು ಒಳ್ಳೆಯ ಕಲಿಕಾ ಅನುಭವವಾಗಿದೆ, ತುಂಬಾ ದೊಡ್ಡ ಯಶಸ್ವಿ ಕಂಪನಿಗಳ ಮಾಲೀಕರು ಕೂಡ ತಮ್ಮ ಕಂಪನಿಯ ಅಭಿವೃದ್ಧಿಯ ಪಯಣದಲ್ಲಿ ಹೊಸಹೊಸ ಸಂಗತಿಗಳನ್ನು ಕಲಿಯಬೇಕಾಯಿತು. ಉದ್ಯಮಶೀಲತೆ ಚಟುವಟಿಕೆಯು ಬೆಳವಣಿಗೆಯನ್ನು, ಅಭಿವೃದ್ಧಿಯನ್ನು ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರಗಳನ್ನು ಕೊಡಮಾಡುತ್ತದೆ. ಮತ್ತು ಇಂದಿನ ಟ್ರೆಂಡ್ ಪ್ರಕಾರ, ಮಹಿಳೆಯರು ಭವಿಷ್ಯದ ಉದ್ಯಮಶೀಲತೆಯ ಬೆಳವಣಿಗೆಯನ್ನು ಮುನ್ನಡೆಸುವಲ್ಲಿ ಕಾರಣಕರ್ತರಾಗುವರು.