ಸ್ಟಾರ್ಟಪ್ಗಳಿಗೆಂದೇ ಪ್ರತ್ಯೇಕವಾಗಿ ನಿರ್ಮಿಸಲಾದ ಭಾರತದ ಮೊದಲ ಕಾನೂನು ಸಲಹಾ ವೇದಿಕೆಯೆಂದರೆ ಅದು ಲಾಯರ್ಡ್. ಸ್ಟಾರ್ಟಪ್ಗಳು ಸಮಾಲೋಚನೆಗಳನ್ನು ಬುಕ್ ಮಾಡಸಬಹುದು ಅಥವಾ ಪ್ರಮುಖ ಕಾನೂನು ಸಲಹೆಗಾರರಿಂದ ಪ್ರಸ್ತಾಪಗಳನ್ನು ಸಂಪೂರ್ಣ ಉಚಿತವಾಗಿ ಪಡೆಯಬಹುದು. ಚಿಂತನೆಗಳನ್ನು ಹುಟ್ಟುಹಾಕುವುದರಿಂದ ಹಿಡಿದು ನಿರ್ಗಮನದವರೆಗೂ ಲಾಯರ್ಡ್ 2500+ ಸ್ಟಾರ್ಟಪ್ಗಳಿಗೆ ಅವರ ಕಾನೂನು ಅವಶ್ಯಕತೆಗಳನ್ನು ಪೂರೈಸಲು ಸಹಾಯ ಮಾಡಿದ್ದಾರೆ.
_______________________________________________________________________________________________
ಒದಗಿಸುತ್ತಿರುವ ಸೇವೆಗಳು
ಕರಾರುಗಳು ಮತ್ತು ಒಪ್ಪಂದಗಳು: ಸರಿಯಾದ ಸಮಯದಲ್ಲಿ ಸರಿಯಾದ ಒಪ್ಪಂದಗಳನ್ನು ಜಾರಿಗೊಳಿಸುವ ಮೂಲಕ ನಿಮ್ಮ ವ್ಯವಹಾರವನ್ನು ರಕ್ಷಿಸಿ. ನಿಮ್ಮ ವ್ಯವಹಾರದ ಅಗತ್ಯಗಳು-ಷೇರುದಾರರ ಒಪ್ಪಂದಗಳು, ಕ್ಲೈಂಟ್/ಮಾರಾಟಗಾರರ ಒಪ್ಪಂದಗಳು ಮತ್ತು ವೆಬ್ಸೈಟ್ನ ನಿಯಮಗಳು ಮತ್ತು ಷರತ್ತುಗಳನ್ನು ಅರ್ಥಮಾಡಿಕೊಳ್ಳಲು ತಜ್ಞರೊಂದಿಗೆ ಚರ್ಚಿಸಿ.
1ಬೌದ್ಧಿಕ ಆಸ್ತಿ: ನಿಮ್ಮ ಬೌದ್ಧಿಕ ಆಸ್ತಿಯನ್ನು ರಚಿಸುವ ಹಾಗೂ ಭದ್ರಪಡಿಸುವ ಮೂಲಕ ನಿಮ್ಮ ಬ್ರ್ಯಾಂಡ್ ಅನ್ನು ರಕ್ಷಿಸಿ ಮತ್ತು ಸ್ಪರ್ಧೆಯಲ್ಲಿ ಮುಂದೆ ಇರಿ. ಟ್ರೇಡ್ಮಾರ್ಕ್ಗಳು, ಪೇಟೆಂಟ್ಗಳು, ವಿನ್ಯಾಸ, ಕೃತಿಸ್ವಾಮ್ಯ ಮತ್ತು ವ್ಯಾಪಾರ ರಹಸ್ಯಗಳನ್ನು ಸಲ್ಲಿಸಲು ಮತ್ತು ಅದಕ್ಕಾಗಿ ಹೋರಾಡಲು ಲಾಯರ್ಡ್ ನಿಮಗೆ ಸಹಾಯ ಮಾಡುತ್ತದೆ.
2ಸ್ಟಾರ್ಟಪ್ ನಿಧಿ ಮತ್ತು ಹಣಕಾಸು: ಹೂಡಿಕೆದಾರರೊಂದಿಗೆ ಸಮತೋಲಿತ ನಿಯಮಗಳನ್ನು ಹೊಂದಿರುವುದು ಆನಂದದಾಯಕ ವ್ಯವಹಾರದ ಕೀಲಿಕೈ. ಹೂಡಿಕೆದಾರರ ಟರ್ಮ್-ಶೀಟ್ ಅನ್ನು ಭೇದಿಸಲು ಹಾಗೂ ನಿಮ್ಮ ಕಂಪನಿಯ ಆರ್ಥಿಕ ಬೆಳವಣಿಗೆಯನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುವಲ್ಲಿ ವಕೀಲರು ನಿರ್ಣಾಯಕ ಪಾತ್ರ ವಹಿಸುತ್ತಾರೆ.
3ನೋಂದಣಿಗಳು, ಪರವಾನಗಿಗಳು ಮತ್ತು ಅನುಸರಣೆಗಳು: ತಜ್ಞರ ಸಹಾಯದಿಂದ ನಿಮ್ಮ ಸ್ಟಾರ್ಟಪ್ ಅನ್ನು ಎಚ್ಚರಿಕೆಯಿಂದ ರಚಿಸುವ ಮೂಲಕ ನಿಮ್ಮ ಕಂಪನಿಯ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿ. ಅಗತ್ಯವಾದ ಪರವಾನಗಿಗಳನ್ನು ಪಡೆಯಲು ಮತ್ತು ಅಭಿವೃದ್ಧಿ ಹೊಂದುತ್ತಿರುವ ವ್ಯವಹಾರವನ್ನು ನಿರ್ಮಿಸಲು ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸುವಂತೆ ನಾವು ನಿಮಗೆ ಸಲಹೆ ನೀಡುತ್ತೇವೆ.
4