ಸ್ಟಾರ್ಟಪ್ ಇಂಡಿಯಾ ಬಗ್ಗೆ

ಸ್ಟಾರ್ಟಪ್ ಇಂಡಿಯಾವು ಭಾರತ ಸರಕಾರದ ಪ್ರಮುಖ ತೊಡಗಿಕೆ ಆಗಿದ್ದು, ಸ್ಟಾರ್ಟಪ್ ಸಂಸ್ಕೃತಿಯನ್ನು ಬೆಳೆಸುವ ಮತ್ತು ನಾವೀನ್ಯತೆಗೆ ಮತ್ತು ಉದ್ಯಮಶೀಲತೆಗೆ ಒಳಪಡಿಕೆಯುಳ್ಳ ಪರಿಸರವನ್ನು ನಿರ್ಮಿಸುವ ಉದ್ದೇಶವನ್ನು ಹೊಂದಿದೆ.

ನೋಂದಾಯಿಸಿ

ಸ್ಟಾರ್ಟಪ್ ಇಂಡಿಯಾ ತೊಡಗಿಕೆ ಎಂದರೇನು?

16 ನೇ ಜನವರಿ 2016 ರಲ್ಲಿ ಆರಂಭಿಸಲಾದ ಸ್ಟಾರ್ಟಪ್ ಇಂಡಿಯಾ ತೊಡಗಿಕೆಯಲ್ಲಿ, ಹಲವಾರು ಕಾರ್ಯಕ್ರಮಗಳನ್ನು ಉದ್ಯಮಿಗಳಿಗೆ ಸಹಾಯವಾಗುವ ಉದ್ದೇಶದಿಂದ ಜಾರಿಗೊಳಿಸಲಾಗಿದೆ. ಒಂದು ಸಹಾಯಕಾರಿ ಸ್ಟಾರ್ಟಪ್ ಪರಿಸರವನ್ನು ಉಂಟುಮಾಡುವುದು ಮತ್ತು ಭಾರತವನ್ನು ಕೆಲಸ ಹುಡುಕುವವರ ದೇಶಕ್ಕಿಂತ ಕೆಲಸ ಹುಟ್ಟು ಹಾಕುವವರ ದೇಶವಾಗಿ ಮಾಡುವ ಉದ್ದೇಶವನ್ನು ಹೊಂದಿದೆ. ಈ ಕಾರ್ಯಕ್ರಮಗಳನ್ನು ಮೀಸಲಾದ ಸ್ಟಾರ್ಟಪ್ ಇಂಡಿಯಾ ತಂಡವು ನಿರ್ವಹಿಸುತ್ತದೆ, ಇದು ಉದ್ಯಮ ಮತ್ತು ಆಂತರಿಕ ವ್ಯಾಪಾರ ಪ್ರಚಾರ ಇಲಾಖೆಗೆ (ಡಿಪಿಐಐಟಿ) ವರದಿ ಮಾಡುತ್ತದೆ

 

ಸ್ಟಾರ್ಟಪ್ ಇಂಡಿಯಾದ ಕಾರ್ಯಕ್ರಮಗಳ ವ್ಯಾಪ್ತಿಯನ್ನು ಈ ಕೆಳಗಿನಂತೆ ಕ್ರಿಯಾ ಯೋಜನೆಯಲ್ಲಿ ನಿರೂಪಿಸಲಾಗಿದೆ.

 

ಸ್ಟಾರ್ಟಪ್‌ಗಳಿಗೆ ಪ್ರಮುಖ ಬೆಂಬಲಗಳು

ಸ್ಟಾರ್ಟಪ್ ಇಂಡಿಯಾ ತೊಡಗಿಕೆ ಅಡಿಯಲ್ಲಿ

0

ಸರಳೀಕರಣ ಮತ್ತು ಬೆಂಬಲ

ಸುಲಭವಾದ ಅನುಸರಣೆ, ನಿಯಂತ್ರಕ ಮತ್ತು ಪೇಟೆಂಟ್ ಬೆಂಬಲ, ಮಾರುಕಟ್ಟೆ ಪ್ರವೇಶ ಮತ್ತು ಫಂಡಿಂಗ್ ಬೆಂಬಲ, ಮತ್ತು ಸ್ಟಾರ್ಟಪ್‌ಗಳಿಗೆ ನೆಟ್ವರ್ಕ್ ಮಾಡಲು ಮತ್ತು ಯಶಸ್ವಿಯಾಗಲು ಸಾಧನಗಳನ್ನು ಅಕ್ಸೆಸ್ ಮಾಡಲು ವೆಬ್ ಪೋರ್ಟಲ್.

0

ಫಂಡಿಂಗ್ ಮತ್ತು ಪ್ರೋತ್ಸಾಹಗಳು

ಅರ್ಹ ಸ್ಟಾರ್ಟಪ್‌ಗಳಿಗೆ ಆದಾಯ ತೆರಿಗೆ ಮತ್ತು ಬಂಡವಾಳ ಲಾಭಗಳ ತೆರಿಗೆಯ ವಿನಾಯಿತಿಗಳು; ಸೀಡ್ ಫಂಡ್, ಫಂಡ್ ಆಫ್ ಫಂಡ್, ಹೂಡಿಕೆದಾರರ ಸಂಪರ್ಕ ಪೋರ್ಟಲ್ ಮತ್ತು ಸ್ಟಾರ್ಟಪ್ ಪರಿಸರ ವ್ಯವಸ್ಥೆಯಲ್ಲಿ ಹೆಚ್ಚಿನ ಬಂಡವಾಳವನ್ನು ಸೇರಿಸಲು ಕ್ರೆಡಿಟ್ ಗ್ಯಾರಂಟಿ ಯೋಜನೆ.

0

ಇಂಕ್ಯುಬೇಶನ್ ಮತ್ತು ಉದ್ಯಮ-ಶೈಕ್ಷಣಿಕ ಪಾಲುದಾರಿಕೆಗಳು

ನಿಮ್ಮ ಸ್ಟಾರ್ಟಪ್ ಅನ್ನು ಬೆಳೆಸಲು ಸಹಾಯ ಮಾಡಲು ಇಂಕ್ಯುಬೇಟರ್‌ಗಳು ಮತ್ತು ನಾವೀನ್ಯತೆ ಲ್ಯಾಬ್‌ಗಳು, ಎಂಎಎಆರ್‌ಜಿ ಮಾರ್ಗದರ್ಶನ ಸಂಪರ್ಕ, ಕಾರ್ಯಕ್ರಮಗಳು, ಸ್ಪರ್ಧೆಗಳು ಮತ್ತು ಅನುದಾನಗಳು.