ಡಿಪಿಐಐಟಿ ಮಾನ್ಯತೆ

ಸ್ಟಾರ್ಟಪ್ ಇಂಡಿಯಾ ತೊಡಗುವಿಕೆಯ ಅಡಿಯಲ್ಲಿ, ತೆರಿಗೆ ಪ್ರಯೋಜನಗಳು, ಸುಲಭ ಅನುಸರಣೆ, ಐಪಿಆರ್ ಫಾಸ್ಟ್-ಟ್ರ್ಯಾಕಿಂಗ್ ಮತ್ತು ಇನ್ನೂ ಹೆಚ್ಚಿನವುಗಳನ್ನು ಅಕ್ಸೆಸ್ ಮಾಡಲು ಅರ್ಹ ಕಂಪನಿಗಳು ಡಿಪಿಐಐಟಿಯಿಂದ ಸ್ಟಾರ್ಟಪ್‌ಗಳಾಗಿ ಗುರುತಿಸಲ್ಪಡಬಹುದು. ಕೆಳಗಿರುವ ಅರ್ಹತೆ ಮತ್ತು ಪ್ರಯೋಜನಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ.

ಗುರುತಿಸಲ್ಪಡಿ
ನಿಮ್ಮ ಕಂಪನಿ ಸ್ಟಾರ್ಟಪ್ ಆಗಿದೆಯೇ?

ಡಿಪಿಐಐಟಿ ಸ್ಟಾರ್ಟಪ್ ಮಾನ್ಯತೆಗಾಗಿ ಅರ್ಹರೆಂದು ಪರಿಗಣನೆ ಪಡೆಯಲು ನಿಮ್ಮ ಕಂಪನಿ ಈ ಮಾನದಂಡಗಳನ್ನು ಪೂರೈಸುವುದು ಕಡ್ಡಾಯ.

ಏಕೆ ನೋಂದಣಿ ಮಾಡಬೇಕು?

ಸ್ಟಾರ್ಟಪ್ ಇಂಡಿಯಾ ತೊಡಗುವಿಕೆ ಅಡಿಯಲ್ಲಿ ಸ್ಟಾರ್ಟಪ್‌‌ಗಳು ಈ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂದು ಡಿಪಿಐಐಟಿ ಅಂಗೀಕರಿಸಿದೆ

1 A. ಉದ್ದೇಶ

ಸ್ಟಾರ್ಟಪ್‌‌ಗಳ ಮೇಲಿನ ನಿಯಂತ್ರಕ ಹೊರೆಗಳನ್ನು ಕಡಿಮೆ ಮಾಡಲು, ಆ ಮೂಲಕ ಅವರ ಪ್ರಮುಖ ವ್ಯಾಪಾರಾದ ಮೇಲೆ ಗಮನ ಹರಿಸಲು ಅವರಿಗೆ ಅನುವು ಮಾಡಿ, ಅನುಸರಣಾ ವೆಚ್ಚವನ್ನು ಕಡಿಮೆ ಇರಿಸಲಾಗುವುದು.

2 B. ಪ್ರಯೋಜನಗಳು
  • ಸರಳ ಆನ್ಲೈನ್ ಪ್ರಕ್ರಿಯೆಯ ಮೂಲಕ 6 ಕಾರ್ಮಿಕ ಕಾನೂನುಗಳು ಮತ್ತು 3 ಪರಿಸರ ಕಾನೂನುಗಳ ಅನುಸರಣೆಯನ್ನು ಸ್ವಯಂ-ಪ್ರಮಾಣೀಕರಿಸಲು ಸ್ಟಾರ್ಟಪ್‌ಗಳಿಗೆ ಅನುಮತಿ ನೀಡಲಾಗುತ್ತದೆ.
  • ಕಾರ್ಮಿಕ ಕಾನೂನುಗಳ ಸಂದರ್ಭದಲ್ಲಿ, 5 ವರ್ಷಗಳ ಅವಧಿಗೆ ಯಾವುದೇ ತಪಾಸಣೆಗಳನ್ನು ನಡೆಸಲಾಗುವುದಿಲ್ಲ. ಉಲ್ಲಂಘನೆಗಳ ವಿಶ್ವಾಸಾರ್ಹ ಮತ್ತು ಪರಿಶೀಲಿಸಬಹುದಾದ ದೂರನ್ನು ಸ್ವೀಕರಿಸಿದ ನಂತರ ಮಾತ್ರ ಸ್ಟಾರ್ಟಪ್‌ಗಳನ್ನು ಪರಿಶೀಲಿಸಬಹುದು, ಬರವಣಿಗೆಯಲ್ಲಿ ಸಲ್ಲಿಸಲಾಗಿದೆ ಮತ್ತು ತಪಾಸಣೆಯ ಅಧಿಕಾರಿಗೆ ಕನಿಷ್ಠ ಒಂದು ಹಂತದ ಹಿರಿಯರಿಂದ ಅನುಮೋದಿಸಲಾಗಿದೆ.
  • ಪರಿಸರ ಕಾನೂನುಗಳ ಸಂದರ್ಭದಲ್ಲಿ, 'ವೈಟ್ ಕೆಟಗರಿ' (ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ವ್ಯಾಖ್ಯಾನಿಸಿದಂತೆ) ಅಡಿಯಲ್ಲಿ ಬರುವ ಸ್ಟಾರ್ಟಪ್‌ಗಳು ಸ್ವಯಂ-ಪ್ರಮಾಣೀಕರಣ ಅನುಸರಣೆಯನ್ನು ಸಾಧ್ಯವಾಗಿಸುತ್ತವೆ ಮತ್ತು ಅಂತಹ ಸಂದರ್ಭಗಳಲ್ಲಿ ಕೆಲವೇ ಬಾರಿ ಪರಿಶೀಲನೆಗಳನ್ನು ಮಾತ್ರ ನಡೆಸಲಾಗುತ್ತದೆ.

 

ಕಾರ್ಮಿಕ ಕಾನೂನುಗಳು:

 

  • ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು (ಉದ್ಯೋಗ ಮತ್ತು ಸೇವೆಯ ಷರತ್ತುಗಳ ನಿಯಂತ್ರಣ) ಕಾಯ್ದೆ, 1996
  • ಅಂತರ-ರಾಜ್ಯ ವಲಸೆ ಕಾರ್ಮಿಕರ (ಉದ್ಯೋಗ ಮತ್ತು ಸೇವೆಯ ಷರತ್ತುಗಳ ನಿಯಂತ್ರಣ) ಕಾಯ್ದೆ, 1979
  • ಗ್ರ್ಯಾಚುಟಿ ಪಾವತಿಯ ಕಾಯಿದೆ, 1972
  • ಗುತ್ತಿಗೆ ಕಾರ್ಮಿಕ (ನಿಯಂತ್ರಣ ಮತ್ತು ನಿರ್ಮೂಲನೆ) ಕಾಯಿದೆ, 1970
  • ನೌಕರರ ಪ್ರಾವಿಡೆಂಟ್ ಫಂಡ್‌ಗಳು ಮತ್ತು ವಿವಿಧ ನಿಬಂಧನೆಗಳ ಕಾಯಿದೆ, 1952
  • ನೌಕರರ ರಾಜ್ಯ ವಿಮಾ ಕಾಯಿದೆ, 1948

 

ಪರಿಸರ ಕಾನೂನುಗಳು:

 

  • ನೀರು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆ, 1974
  • ನೀರು (ಮಾಲಿನ್ಯದ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಸೆಸ್ ತಿದ್ದುಪಡಿ ಕಾಯ್ದೆ, 2003
  • ಗಾಳಿ (ಮಾಲಿನ್ಯದ ತಡೆಯುವಿಕೆ ಮತ್ತು ಹತೋಟಿ) ಕಾಯ್ದೆ, 1981
3 C. ಅರ್ಹತೆ

10 ವರ್ಷಗಳ ಒಳಗೆ ಕಟ್ಟಲಾದ ಡಿಪಿಐಐಟಿಯಿಂದ ಗುರುತಿಸಲ್ಪಟ್ಟ ಸ್ಟಾರ್ಟಪ್‌ಗಳು. ಡಿಪಿಐಐಟಿ ಗುರುತಿಸುವಿಕೆಗೆ ಅಪ್ಲೈ ಮಾಡಲು, ಈ ಕೆಳಗಿನ "ಗುರುತಿಸಲ್ಪಡಿ" ಕ್ಲಿಕ್ ಮಾಡಿ.

4 D. ನೋಂದಣಿ ಪ್ರಕ್ರಿಯೆ
  • ಇಲ್ಲಿ ಕ್ಲಿಕ್ ಮಾಡಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಶ್ರಮ ಸುವಿಧಾ ಪೋರ್ಟಲ್‌ಗೆ ಹೋಗಲು.
  • ಶ್ರಮ್ ಸುವಿಧಾ ಪೋರ್ಟಲ್‌ನಲ್ಲಿ ನೋಂದಣಿ ಮಾಡಿ ಮತ್ತು ನಂತರ ಲಾಗಿನ್ ಮಾಡಿ.
  • ಯಶಸ್ವಿ ಲಾಗಿನ್ ನಂತರ, "ನಿಮ್ಮ ಯಾವುದೇ ಸಂಸ್ಥೆ ಸ್ಟಾರ್ಟಪ್ ಆಗಿದೆಯೇ" ಲಿಂಕ್ ಕ್ಲಿಕ್ ಮಾಡಿ
  • ಸಲಹೆಗಳನ್ನು ಪಾಲಿಸಿ.
1 A. ಉದ್ದೇಶ

ಶೋಧನೆ ಸ್ಟಾರ್ಟಪ್‌‌ಗಳ ಬ್ರೆಡ್ ಮತ್ತು ಬಟರ್. ಪೇಟೆಂಟ್‌ಗಳು ಹೊಸ ಹೊಸ ಕಲ್ಪನೆಗಳನ್ನು ಕಾಪಾಡಿಕೊಳ್ಳುವ ದಾರಿ ಆಗಿರುವುದರಿಂದ ನಿಮ್ಮ ಕಂಪನಿಗೆ ಮೇಲ್-ಪೈಪೋಟಿಯನ್ನು ಕೊಡುವುದಲ್ಲದೆ, ನಿಮ್ಮ ಪ್ರಾಡಕ್ಟ್ ಅಥವಾ ಪ್ರೋಸೆಸ್ ಅನ್ನು ಪೇಟೆಂಟ್ ಮಾಡಿಸುವುದರಿಂದ ಅದರ ಮೌಲ್ಯ ಹೆಚ್ಚಾಗುವುದು ಮತ್ತು ನಿಮ್ಮ ಕಂಪನಿಯ ಮೌಲ್ಯವೂ ಏರುವುದು.

 

ಆದರೆ ಈ ಮುಂಚೆ, ಪೇಟೆಂಟ್ ಸಲ್ಲಿಕೆ ಪ್ರಕ್ರಿಯೆಯು ವೆಚ್ಚದಾಯಕವಾಗಿತ್ತು ಮತ್ತು ಸಮಯ ತೆಗೆದುಕೊಳ್ಳುವಂತಹದ್ದು ಆಗಿತ್ತು. ಇದರಿಂದಾಗಿ ಪೇಟೆಂಟ್ ಸಲ್ಲಿಕೆ ಹಲವು ಸ್ಟಾರ್ಟಪ್‌ಗಳಿಗೆ ಕಷ್ಟಕರವಾಗಿತ್ತು.

 

ಪೇಟೆಂಟ್ ಪಡೆದುಕೊಳ್ಳಲು ಬೇಕಾದ ಸಮಯವನ್ನು ಕಡಿಮೆ ಮಾಡುವುದು ಮತ್ತು ವೆಚ್ಚವನ್ನು ತಗ್ಗಿಸುವುದೇ ಇದರ ಉದ್ದೇಶವಾಗಿದೆ, ಇದರಿಂದ ಅವರಿಗೆ ತಮ್ಮ ನಾವೀನ್ಯತೆಗಳನ್ನು ಕಾಪಾಡಿಕೊಳ್ಳಲು ಮತ್ತು ಅವರ ನಾವೀನ್ಯತೆಯನ್ನು ಮುಂದುವರೆಸುವಲ್ಲಿ ಪ್ರೋತ್ಸಾಹ ನೀಡಿದಂತಾಗುತ್ತದೆ.

2 B. ಪ್ರಯೋಜನಗಳು
  • ಸ್ಟಾರ್ಟಪ್ ಪೇಟೆಂಟ್ ಅಪ್ಲಿಕೇಶನ್‌ಗಳ ತ್ವರಿತ ಟ್ರ್ಯಾಕಿಂಗ್: ಸ್ಟಾರ್ಟಪ್‌ಗಳು ಸಲ್ಲಿಸಿದ ಪೇಟೆಂಟ್ ಅಪ್ಲಿಕೇಶನ್‌ಗಳನ್ನು ಪರೀಕ್ಷೆಗಾಗಿ ವೇಗವಾಗಿ ಟ್ರ್ಯಾಕ್ ಮಾಡಲಾಗುತ್ತದೆ, ಇದರಿಂದಾಗಿ ಅವುಗಳ ಮೌಲ್ಯವನ್ನು ಶೀಘ್ರದಲ್ಲಿ ಅರ್ಥಮಾಡಿಕೊಳ್ಳಬಹುದು.
  • ಐಪಿ ಅಪ್ಲಿಕೇಶನ್‌ಗಳನ್ನು ಸಲ್ಲಿಸಲು ಸಹಾಯ ಮಾಡಲು ಸೌಲಭ್ಯಕಾರರ ಸಮಿತಿ: ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ, "ಸೌಕರ್ಯಕಾರರ" ಸಮಿತಿಯನ್ನು ಪೇಟೆಂಟ್‌ಗಳು, ವಿನ್ಯಾಸಗಳು ಮತ್ತು ಟ್ರೇಡ್‌ಮಾರ್ಕ್‌ಗಳ ಮಹಾನಿಯಂತ್ರಕರು (ಸಿಜಿಪಿಡಿಟಿಎಂ) ಎಂಪನೆಲ್ ಮಾಡಬೇಕು, ಅವರು ತಮ್ಮ ನಡತೆ ಮತ್ತು ಕಾರ್ಯಗಳನ್ನು ನಿಯಂತ್ರಿಸುತ್ತಾರೆ. ವಿವಿಧ ಬೌದ್ಧಿಕ ಆಸ್ತಿಯ ಮೇಲೆ ಸಾಮಾನ್ಯ ಸಲಹೆಯನ್ನು ಒದಗಿಸಲು ಮತ್ತು ಇತರ ದೇಶಗಳಲ್ಲಿ ಬೌದ್ಧಿಕ ಆಸ್ತಿಯನ್ನು ರಕ್ಷಿಸುವ ಮತ್ತು ಉತ್ತೇಜಿಸುವ ಮಾಹಿತಿಯನ್ನು ಒದಗಿಸಲು ಸೌಲಭ್ಯಕಾರರು ಜವಾಬ್ದಾರರಾಗಿರುತ್ತಾರೆ.
  • ಸೌಲಭ್ಯ ವೆಚ್ಚವನ್ನು ಭರಿಸಲು ಸರ್ಕಾರ: ಈ ಯೋಜನೆಯಡಿಯಲ್ಲಿ, ಸ್ಟಾರ್ಟಪ್ ಫೈಲ್ ಮಾಡಬಹುದಾದ ಯಾವುದೇ ಸಂಖ್ಯೆಯ ಪೇಟೆಂಟ್‌ಗಳು, ಟ್ರೇಡ್‌ಮಾರ್ಕ್‌ಗಳು ಅಥವಾ ವಿನ್ಯಾಸಗಳಿಗೆ ಸೌಕರ್ಯಕಾರರ ಸಂಪೂರ್ಣ ಶುಲ್ಕವನ್ನು ಕೇಂದ್ರ ಸರ್ಕಾರವು ಭರಿಸುತ್ತದೆ ಮತ್ತು ಸ್ಟಾರ್ಟಪ್‌ಗಳು ಪಾವತಿಸಬೇಕಾದ ಶಾಸನಬದ್ಧ ಶುಲ್ಕಗಳ ವೆಚ್ಚವನ್ನು ಮಾತ್ರ ಭರಿಸುತ್ತವೆ.
  • ಅಪ್ಲಿಕೇಶನ್ ಫೈಲ್ ಮಾಡುವುದರ ಮೇಲೆ ರಿಯಾಯಿತಿ: ಇತರ ಕಂಪನಿಗಳಿಗೆ ಸಂಬಂಧಿಸಿದಂತೆ ಪೇಟೆಂಟ್‌ಗಳನ್ನು ಸಲ್ಲಿಸುವಲ್ಲಿ ಸ್ಟಾರ್ಟಪ್‌ಗಳಿಗೆ 80% ರಿಯಾಯಿತಿಯನ್ನು ಒದಗಿಸಲಾಗುವುದು. ಇದು ನಿರ್ಣಾಯಕ ಸ್ವರೂಪದ ವರ್ಷಗಳಲ್ಲಿ ವೆಚ್ಚಗಳನ್ನು ಸರಿಪಡಿಸಲು ಅವರಿಗೆ ಸಹಾಯ ಮಾಡುತ್ತದೆ
3 C. ಅರ್ಹತೆ

ಈ ಸ್ಟಾರ್ಟಪ್ ಡಿಪಿಐಐಡಿಯಿಂದ ಗುರುತಿಸಲ್ಪಡುವ ಅವಶ್ಯಕತೆ ಇದೆ. ಡಿಪಿಐಐಟಿನಿಂದ ಗುರುತಿಸುವಿಕೆಗೆ ಅಪ್ಲೈ ಮಾಡಲು, ಈ ಕೆಳಗೆ ''ಗುರುತಿಸಲ್ಪಡಿ' ಎಂಬುದರ ಮೇಲೆ ಕ್ಲಿಕ್ ಮಾಡಿ.

4 d. ನೋಂದಣಿ ಪ್ರಕ್ರಿಯೆ ಮತ್ತು ಡಾಕ್ಯುಮೆಂಟ್‌ಗಳು

ನೀವು ಬಯಸಿದ ಸೆಕ್ಟರ್ ಮತ್ತು ಅನುವುಕಾರರ ನ್ಯಾಯವ್ಯಾಪ್ತಿಯ ಆಧಾರದ ಮೇಲೆ ಪ್ರೋಸೆಸ್ ಬಗ್ಗೆ ಅಂದಂದಿನ ಮಾಹಿತಿಗಾಗಿ ಮತ್ತು ಪೇಟೆಂಟ್ ಅಥವಾ ಟ್ರೇಡ್‌ಮಾರ್ಕ್ ಅರ್ಜಿಗೆ ಬೇಕಾದ ಡಾಕ್ಯುಮೆಂಟ್‌ಗಳಿಗಾಗಿ - ನೀವು ಸೂಕ್ತ ಅನುವುಕಾರಕರನ್ನು ನೀವು ಸಂಪರ್ಕಿಸಬೇಕು.

ಟ್ರೇಡ್‌ಮಾರ್ಕ್ ಫೆಸಿಲಿಟೇಟರ್‌ಗಳು ಮತ್ತು ಪೇಟೆಂಟ್ ಫೆಸಿಲಿಟೇಟರ್‌ಗಳ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ.

 

5 e. ದುಮ್ಮಾನ ಪರಿಹಾರ

ಯಾವುದೇ ಪ್ರಶ್ನೆಗಳು ಅಥವಾ ಸ್ಪಷ್ಟೀಕರಣಗಳ ಅಗತ್ಯವಿದ್ದಲ್ಲಿ, ದಯವಿಟ್ಟು ಈ ಮೂಲಕ ನಮ್ಮನ್ನು ಸಂಪರ್ಕಿಸಿ ನಮ್ಮನ್ನು ಸಂಪರ್ಕಿಸಿ ಪೇಜ್.

2 B. ಪ್ರಯೋಜನಗಳು

ಸ್ಥಾಪನೆಯಾದ ನಂತರ ಅರ್ಹ ಸ್ಟಾರ್ಟಪ್‌ಗಳಿಗೆ ತಮ್ಮ ಮೊದಲ ಹತ್ತು ವರ್ಷಗಳಲ್ಲಿ ಸತತ 3 ಹಣಕಾಸು ವರ್ಷಗಳವರೆಗೆ ಆದಾಯ ತೆರಿಗೆಯನ್ನು ಪಾವತಿಸುವುದರಿಂದ ವಿನಾಯಿತಿ ನೀಡಬಹುದು. ಕ್ಲಿಕ್ ಮಾಡಿ ಇಲ್ಲಿ ಕ್ಲಿಕ್ ಮಾಡಿ ಆದಾಯ ತೆರಿಗೆ ವಿನಾಯಿತಿಗಳ ವಿವರಗಳನ್ನು ವಿವರಿಸುವ ಮೂಲ ಪಾಲಿಸಿ ನೋಟಿಫಿಕೇಶನ್‌ಗಾಗಿ.

3 C. ಅರ್ಹತೆ
  • ಆ ಘಟಕವು ಡಿಪಿಐಐಟಿಯಿಂದ ಗುರುತಿಸಲ್ಪಟ್ಟ ಸ್ಟಾರ್ಟಪ್ ಆಗಿರಬೇಕು
  • ಸೆಕ್ಷನ್ 80ಐಎಸಿ ಅಡಿಯಲ್ಲಿ ಬರೀ ಪ್ರೈವೇಟ್ ಲಿಮಿಟೆಡ್ ಕಂಪನಿಗಳು ಅಥವಾ ಸೀಮಿತ ಹೊಣೆಗಾರಿಕೆಯ ಪಾಲುದಾರಿಕೆಗಳು ತೆರಿಗೆ ವಿನಾಯಿತಿ ಪಡೆಯಲು ಅರ್ಹವಾಗಿರುತ್ತವೆ
  • 1ನೇ ಏಪ್ರಿಲ್, 2016 ರ ನಂತರ ಸ್ಟಾರ್ಟಪ್ ಸ್ಥಾಪನೆಯಾಗಿರಬೇಕು
4 d. ನೋಂದಣಿ ಪ್ರಕ್ರಿಯೆ ಮತ್ತು ಡಾಕ್ಯುಮೆಂಟ್‌ಗಳು
ನೋಂದಣಿ ಪ್ರಕ್ರಿಯೆ
  1. ಸ್ಟಾರ್ಟಪ್ ಇಂಡಿಯಾ ಪೋರ್ಟಲ್‌‌ನಲ್ಲಿ ನೋಂದಣಿ ಮಾಡಿ. ನೋಂದಾಯಿಸಲು ಇಲ್ಲಿ ಕ್ಲಿಕ್ ಮಾಡಿ
  2. ನೋಂದಣಿಗಾಗಿ, ಡಿಪಿಐಐಟಿಯಿಂದ (ಉದ್ಯಮ ನೀತಿ ಮತ್ತು ಪ್ರಚಾರ ಇಲಾಖೆ) ಗುರುತಿಸಲ್ಪಡಲು ಅರ್ಜಿ ಹಾಕಿ. ಮಾನ್ಯತೆಗಾಗಿ ಇಲ್ಲಿ ಕ್ಲಿಕ್ ಮಾಡಿ
  3. ಸೆಕ್ಷನ್ 80 ಐಎಸಿ ವಿನಾಯಿತಿ ಅರ್ಜಿಯನ್ನು ಇಲ್ಲಿ ಪಡೆಯಿರಿ
  4. ಈ ಕೆಳಗೆ ಹೇಳಿರುವ ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡುವುದರ ಜತೆಗೆ ವಿವರಗಳನ್ನು ತುಂಬಿರಿ ಮತ್ತು ಅರ್ಜಿ ಫಾರಂ ಅನ್ನು ಸಲ್ಲಿಸಿ

 

ನೋಂದಣಿ ಡಾಕ್ಯುಮೆಂಟ್‌ಗಳು

  • ಪ್ರೈವೇಟ್ ಲಿಮಿಟೆಡ್ ಕಂಪನಿಗಳ ಸಂಸ್ಥೆಯ ಮೆಮೊರಂಡಂಮ್. / ಎಲ್ಎಲ್‌ಪಿ ಡೀಡ್
  • ಬೋರ್ಡ್ ರೆಸಲ್ಯೂಶನ್ (ಯಾವುದಾದರೂ ಇದ್ದರೆ)
  • ಕಳೆದ ಮೂರು ಹಣಕಾಸಿನ ವರ್ಷಗಳಲ್ಲಿ ಸ್ಟಾರ್ಟಪ್‌ನ ವಾರ್ಷಿಕ ಅಕೌಂಟ್‌ಗಳು
  • ಕಳೆದ ಮೂರು ಹಣಕಾಸು ವರ್ಷಗಳ ಆದಾಯ ತೆರಿಗೆ ರಿಟರ್ನ್ಸ್
5 e. ಅಪ್ಲೈ ಮಾಡಿದ ನಂತರದ ಪ್ರಕ್ರಿಯೆ

ನಿಮ್ಮ ಅರ್ಜಿಯ ಸ್ಟೇಟಸ್ ಅನ್ನು ನೋಡಲು ಸ್ಟಾರ್ಟಪ್ ಇಂಡಿಯಾ ಪೋರ್ಟಲ್ಲಿನ ಡ್ಯಾಶ್‌ಬೋರ್ಡ್ ಅನ್ನು ನೋಡಿ. ನೀವು ಲಾಗಿನ್ ಮಾಡಿದ ಬಳಿಕ, ಪೇಜಿನ ಬಲ-ಮೇಲ್ಗಡೆ ಇದು ಕಂಡುಬರುತ್ತದೆ.

 

ಯಾವುದೇ ಪ್ರಶ್ನೆಗಳು ಅಥವಾ ಸ್ಪಷ್ಟೀಕರಣಗಳ ಅಗತ್ಯವಿದ್ದಲ್ಲಿ, ದಯವಿಟ್ಟು ಈ ಮೂಲಕ ನಮ್ಮನ್ನು ಸಂಪರ್ಕಿಸಿ ನಮ್ಮನ್ನು ಸಂಪರ್ಕಿಸಿ ಪೇಜ್.

2 B. ಪ್ರಯೋಜನಗಳು
  • ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 56(2)(VIIB) ಅಡಿಯಲ್ಲಿ ವಿನಾಯಿತಿ
  • ಅರ್ಹ ಸ್ಟಾರ್ಟಪ್‌ಗಳಲ್ಲಿ ರೂ. 100 ಕೋಟಿಗಿಂತ ಹೆಚ್ಚಿನ ಮೌಲ್ಯದ ಅಥವಾ ರೂ. 250 ಕೋಟಿಗಿಂತ ಹೆಚ್ಚಿನ ವಹಿವಾಟು ಇರುವ ಪಟ್ಟಿ ಮಾಡಲಾದ ಕಂಪನಿಗಳಿಂದ ಹೂಡಿಕೆ ಮಾಡಿದರೆ, ಅಂತಹ ಹೂಡಿಕೆಗೆ ಆದಾಯ ತೆರಿಗೆಯ ಕಾಯಿದೆಯ ಸೆಕ್ಷನ್ 56 (2) VIIB ಅಡಿಯಲ್ಲಿ ವಿನಾಯಿತಿ ನೀಡಲಾಗುತ್ತದೆ
  • ರೂ. 100 ಕೋಟಿಗಿಂತ ಹೆಚ್ಚಿನ ಮೌಲ್ಯದ ಅಥವಾ ರೂ. 250 ಕೋಟಿಗಳಿಗಿಂತ ಹೆಚ್ಚಿನ ವಹಿವಾಟಿನ ಅಧಿಕೃತ ಹೂಡಿಕೆದಾರರು, ಅನಿವಾಸಿಗಳು, ಎಐಎಫ್(ಕೆಟಗರಿ I) ಮತ್ತು ಪಟ್ಟಿ ಮಾಡಲಾದ ಕಂಪನಿಗಳು ಅರ್ಹ ಸ್ಟಾರ್ಟಪ್‌ಗಳಲ್ಲಿ ಮಾಡುವ ಹೂಡಿಕೆಗಳು, ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 56(2)(VIIB) ಅಡಿಯಲ್ಲಿ ವಿನಾಯಿತಿ ಪಡೆಯುತ್ತವೆ
  • ಅರ್ಹ ಸ್ಟಾರ್ಟಪ್‌ಗಳಿಂದ ಪಡೆದ ಶೇರುಗಳ ಪರಿಗಣನೆಯು ಒಟ್ಟು ಮಿತಿ ರೂ. 25 ಕೋಟಿಗಳವರೆಗೆ ವಿನಾಯಿತಿ ಪಡೆಯುತ್ತವೆ
3 C. ಅರ್ಹತೆ
  • ಪ್ರೈವೇಟ್ ಲಿಮಿಟೆಡ್ ಕಂಪನಿ ಆಗಿರಬೇಕು
  • ಡಿಪಿಐಐಡಿಯಿಂದ ಗುರುತಿಸಲ್ಪಟ್ಟ ಸ್ಟಾರ್ಟಪ್ ಆಗಿರಬೇಕು. ಡಿಪಿಐಐಡಿಯಿಂದ ಗುರುತಿಸಲ್ಪಡಲು, ಈ ಕೆಳಗಿನ 'ಗುರುತಿಸಲ್ಪಡಿ' ಮೇಲೆ ಕ್ಲಿಕ್ ಮಾಡಿ'.
  • ವಿಶೇಷ ಆಸ್ತಿ ವರ್ಗಗಳಲ್ಲಿ ಹೂಡಿಕೆ ಮಾಡುವುದಿಲ್ಲ
  • ಸ್ಥಿರ ಆಸ್ತಿ, ರೂ. 10 ಲಕ್ಷಕ್ಕಿಂತ ಹೆಚ್ಚಿನ ಸಾರಿಗೆ ವಾಹನಗಳು, ಲೋನ್‌ಗಳು ಮತ್ತು ಮುಂಗಡಗಳು, ಬೇರೆ ಘಟಕಗಳಿಗೆ ಬಂಡವಾಳ ಕೊಡುಗೆಗಳಲ್ಲಿ ಸ್ಟಾರ್ಟಪ್‌ಗಳು ಹೂಡಿಕೆ ಮಾಡಬಾರದು, ಇದು ಬಿಸಿನೆಸ್ಸಿನ ಸಾಧಾರಣ ಅವಧಿಯನ್ನು ಹೊರತುಪಡಿಸಿರುತ್ತದೆ

 

4 D. ನೋಂದಣಿ ಪ್ರಕ್ರಿಯೆ
  1.  ಸ್ಟಾರ್ಟಪ್ ಇಂಡಿಯಾ ಪೋರ್ಟಲ್‌ನಲ್ಲಿ ನಿಮ್ಮ ಸ್ಟಾರ್ಟಪ್ ಪ್ರೊಫೈಲನ್ನು ನೋಂದಾಯಿಸಿ. ಕ್ಲಿಕ್ ಮಾಡಿ ಇಲ್ಲಿ ಕ್ಲಿಕ್ ಮಾಡಿ ನೋಂದಾಯಿಸಲು.
  2.  ಡಿಪಿಐಐಡಿಯಿಂದ ಗುರುತಿಸಲ್ಪಡಿ. ಹಂತಗಳ ಬಗ್ಗೆ ಹೆಚ್ಚು ತಿಳಿಯಲು, ಈ ಕೆಳಗಿನ 'ಗುರುತಿಸಲ್ಪಡಿ' ಮೇಲೆ ಕ್ಲಿಕ್ ಮಾಡಿ.
  3.  up ಸೆಕ್ಷನ್ 56 ವಿನಾಯಿತಿ ಅಪ್ಲಿಕೇಶನ್ ಫಾರ್ಮ್ ಅನ್ನು ಇಲ್ಲಿ ಫೈಲ್ ಮಾಡಿ.
  4.  ಘೋಷಣೆಯನ್ನು ಸಲ್ಲಿಸಿದ 72 ಗಂಟೆಗಳ ಒಳಗೆ ನೀವು ಸಿಬಿಡಿಟಿ ಕಡೆಯಿಂದ ಇಮೇಲನ್ನು ಪಡೆಯಬೇಕು.
1 a. ಉದ್ದೇಶಗಳು
  • ಸ್ಟಾರ್ಟಪ್‌ಗಳಿಗೆ ತಮ್ಮ ಕಾರ್ಯ ಚಟುವಟಿಕೆಗಳನ್ನು ನಿಲ್ಲಿಸುವುದನ್ನು ಅಥವಾ ಮುಚ್ಚುವುದನ್ನು ಸುಲಭವಾಗಿಸುವುದು, ಉದ್ಯಮಿಗಳಿಗೆ ಅವರ ಬಂಡವಾಳವನ್ನು ಮತ್ತು ಸಂಪನ್ಮೂಲಗಳನ್ನು ಹೆಚ್ಚಿನ ಉತ್ಪತ್ತಿ ಜಾಗಗಳಿಗೆ ಸಾಗಿಸಲು ಅನುಕೂಲವಾಗಿಸುವುದು.
  • ಬಿಸಿನೆಸ್ ಸೋತ ಸಂದರ್ಭದಲ್ಲಿ, ತಮ್ಮ ಬಂಡವಾಳ ಮಧ್ಯ ಸಿಕ್ಕಿಹಾಕಿಕೊಂಡು, ಹೊರಹೋಗುವ ಪ್ರಕ್ರಿಯೆಗಳು ಕಷ್ಟಕರವಾಗದಂತೆ ಮತ್ತು ದೀರ್ಘವಾಗದಂತೆ ಉದ್ಯಮಿಗಳು ಹೊಸ ಕಲ್ಪನೆಗಳೊಂದಿಗೆ ಪ್ರಯೋಗ ಮಾಡಲು ಬೆಂಬಲ ನೀಡುವುದು.
2 B. ಪ್ರಯೋಜನಗಳು
  • ದಿವಾಳಿತನ ಮತ್ತು ಬ್ಯಾಂಕ್ರಪ್ಸಿ ಕೋಡ್ 2016 ಪ್ರಕಾರ, ದಿವಾಳಿತನಕ್ಕೆ ಅರ್ಜಿ ಹಾಕಿರುವ, ಸರಳ ಲೋನ್ ರಚನೆಯನ್ನು ಹೊಂದಿರುವ, ಅಥವಾ ಕೆಲ ಆದಾಯ ವಿಶೇಷ ಕ್ರೈಟೀರಿಯ* ವನ್ನು ತಲುಪುವ ಸ್ಟಾರ್ಟಪ್‌ಗಳು ದಿವಾಳಿತನಕ್ಕೆ ಅರ್ಜಿ ಹಾಕಿರುವ 90 ದಿನಗಳ ಒಳಗೆ ಮುಚ್ಚಬಹುದು.
  • ಸ್ಟಾರ್ಟಪ್‌ಗೆ ದಿವಾಳಿತನದ ವೃತ್ತಿಪರರನ್ನು ನಿಯೋಜಿಸಲಾಗುವುದು, ಇವರು ಬಳಿಕ ಕಂಪನಿಯ ಹೊಣೆಗಾರಿಕೆಯನ್ನು ವಹಿಸಿಕೊಳ್ಳುತ್ತಾರೆ (ಕಂಪನಿಯ ಮುಂದಾಳುಗಳು ಮತ್ತು ಮ್ಯಾನೇಜ್ಮೆಂಟ್ ತಂಡವು ಇನ್ನುಮುಂದೆ ಕಂಪನಿಯನ್ನು ನಡೆಸುವುದಿಲ್ಲ) ಈ ಹೊಣೆಗಾರಿಕೆಯು ಆಸ್ತಿಗಳನ್ನು ಲಿಕ್ವಿಡೇಟ್ ಮಾಡುವುದು ಮತ್ತು ಅಂತಹ ನೇಮಕವಾದ 6 ತಿಂಗಳ ಒಳಗೆ ಸಾಲಗಾರರಿಗೆ ಪಾವತಿಸುವುದನ್ನು ಒಳಗೊಂಡಿರುತ್ತದೆ.
  • ದಿವಾಳಿತನಕ್ಕೆ ವೃತ್ತಿಪರರನ್ನು ನಿಯೋಜಿಸಿದ ನಂತರ, ಲಿಕ್ವಿಡೇಟರ್ ಬಿಸಿನೆಸ್ಸಿನ ತ್ವರಿತ ಮುಚ್ಚುವಿಕೆಗೆ, ಆಸ್ತಿಗಳ ಮಾರಾಟಕ್ಕೆ ಮತ್ತು ಐಬಿಸಿಯಲ್ಲಿ ತೀರ್ಮಾನಿಸಿದ ಹಂಚಿಕೆ ಮಾಡುವ ಹರಿವಿಗೆ ಅನುಗುಣವಾಗಿ ಸಾಲಗಾರರಿಗೆ ಮರುಪಾವತಿ ಮಾಡಲು ಹೊಣೆಗಾರರಾಗಿರುತ್ತಾರೆ. ಈ ಪ್ರಕ್ರಿಯೆಯು ಸೀಮಿತ ಹೊಣೆಗಾರಿಗೆಯ ಕಲ್ಪನೆಯನ್ನು ಗೌರವಿಸುತ್ತದೆ.

*ಮಾನದಂಡವನ್ನು ಕಂಡುಕೊಳ್ಳಬಹುದು ಇಲ್ಲಿ ಕ್ಲಿಕ್ ಮಾಡಿ

1 A. ಉದ್ದೇಶ

ಸಾರ್ವಜನಿಕ ಸಂಗ್ರಹಣೆ ಎಂದರೆ, ಸರಕಾರಿ ಮತ್ತು ರಾಜ್ಯ ಮಾಲೀಕತ್ವದ ಸಂಸ್ಥೆಗಳು ಖಾಸಗಿ ವಲಯದಿಂದ ಸರಕುಗಳು ಮತ್ತು ಸೇವೆಗಳನ್ನು ಕೊಳ್ಳುತ್ತವೆ. ಸರಕಾರಿ ಸಂಸ್ಥೆಗಳು ಗಮನಾರ್ಹ ಖರ್ಚು ಮಾಡುವ ಶಕ್ತಿ ಹೊಂದಿದ್ದು, ಸ್ಟಾರ್ಟಪ್‌ಗಳಿಗೆ ದೊಡ್ಡ ಮಾರುಕಟ್ಟೆಯಾಗಬಲ್ಲವು.

 

ಸ್ಟಾರ್ಟಪ್‌ಗಳಿಗೆ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾಲ್ಗೊಳ್ಳಲು ಸುಲಭವಾಗಿಸುವುದು ಮತ್ತು ಅವರ ಪ್ರಾಡಕ್ಟ್‌ಗಳಿಗೆ ಬೇರೊಂದು ಉತ್ತಮ ಮಾರುಕಟ್ಟೆಯನ್ನು ಅಕ್ಸೆಸ್ ಮಾಡಲು ಅನುವು ಮಾಡುವ ಉದ್ದೇಶವಿದೆ.

2 B. ಪ್ರಯೋಜನಗಳು
  • ಸರ್ಕಾರಿ ಇ-ಮಾರುಕಟ್ಟೆ ಸ್ಥಳದಲ್ಲಿ ನಿಮ್ಮ ಉತ್ಪನ್ನವನ್ನು ಪಟ್ಟಿ ಮಾಡಲು ಅವಕಾಶ: ಸರ್ಕಾರಿ ಇ ಮಾರುಕಟ್ಟೆ ಸ್ಥಳ (ಜಿಇಎಂ) ಆನ್ಲೈನ್ ಸಂಗ್ರಹಣಾ ವೇದಿಕೆಯಾಗಿದೆ ಮತ್ತು ಉತ್ಪನ್ನಗಳು ಮತ್ತು ಸೇವೆಗಳನ್ನು ಸಂಗ್ರಹಿಸಲು ಸರ್ಕಾರಿ ಇಲಾಖೆಗಳಿಗೆ ಅತಿದೊಡ್ಡ ಮಾರುಕಟ್ಟೆ ಸ್ಥಳವಾಗಿದೆ. ಡಿಪಿಐಐಟಿಯಿಂದ ಗುರುತಿಸಲ್ಪಟ್ಟ ಸ್ಟಾರ್ಟಪ್‌ಗಳು ಜಿಇಎಂನಲ್ಲಿ ಮಾರಾಟಗಾರರಾಗಿ ನೋಂದಣಿ ಮಾಡಬಹುದು ಮತ್ತು ತಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ನೇರವಾಗಿ ಸರ್ಕಾರಿ ಘಟಕಗಳಿಗೆ ಮಾರಾಟ ಮಾಡಬಹುದು. ಸರ್ಕಾರದೊಂದಿಗೆ ಪ್ರಯೋಗ ಆದೇಶಗಳ ಮೇಲೆ ಕೆಲಸ ಮಾಡಲು ಸ್ಟಾರ್ಟಪ್‌ಗಳಿಗೆ ಇದು ಉತ್ತಮ ಅವಕಾಶವಾಗಿದೆ.
  • ಪೂರ್ವ ಅನುಭವ/ವಹಿವಾಟಿನಿಂದ ವಿನಾಯಿತಿ: ಸ್ಟಾರ್ಟಪ್‌ಗಳನ್ನು ಉತ್ತೇಜಿಸಲು, ತಿಳಿಸಲಾದ ಗುಣಮಟ್ಟದ ಮಾನದಂಡಗಳು ಅಥವಾ ತಾಂತ್ರಿಕ ಮಾನದಂಡಗಳ ಮೇಲೆ ಯಾವುದೇ ರಾಜಿ ಇಲ್ಲದೆ "ಪೂರ್ವ ಅನುಭವ/ವಹಿವಾಟು" ಮಾನದಂಡದಿಂದ ಉತ್ಪಾದನಾ ವಲಯದಲ್ಲಿನ ಸ್ಟಾರ್ಟಪ್‌ಗಳಿಗೆ ಸರ್ಕಾರವು ವಿನಾಯಿತಿ ನೀಡುತ್ತದೆ. ಅವಶ್ಯಕತೆಗಳ ಪ್ರಕಾರ ಯೋಜನೆಯನ್ನು ಕಾರ್ಯಗತಗೊಳಿಸಲು ಸ್ಟಾರ್ಟಪ್‌ಗಳು ಅಗತ್ಯ ಸಾಮರ್ಥ್ಯವನ್ನು ಕೂಡ ಪ್ರದರ್ಶಿಸಬೇಕು ಮತ್ತು ಭಾರತದಲ್ಲಿ ತಮ್ಮದೇ ಆದ ಉತ್ಪಾದನಾ ಸೌಲಭ್ಯವನ್ನು ಹೊಂದಿರಬೇಕು. ನೋಟಿಫಿಕೇಶನ್ ನೋಡಲು ಇಲ್ಲಿ ಕ್ಲಿಕ್ ಮಾಡಿ
  • ಇಎಂಡಿ ವಿನಾಯಿತಿ: ಸರ್ಕಾರಿ ಟೆಂಡರ್‌ಗಳನ್ನು ಭರ್ತಿ ಮಾಡುವಾಗ ಅರ್ನೆಸ್ಟ್ ಮನಿ ಡೆಪಾಸಿಟ್ (ಇಎಂಡಿ) ಅಥವಾ ಬಿಡ್ ಸೆಕ್ಯೂರಿಟಿಯನ್ನು ಸಲ್ಲಿಸುವುದರಿಂದ ಡಿಪಿಐಐಟಿ ಮಾನ್ಯತೆ ಪಡೆದ ಸ್ಟಾರ್ಟಪ್‌ಗಳಿಗೆ ವಿನಾಯಿತಿ ನೀಡಲಾಗಿದೆ. ನೋಟಿಫಿಕೇಶನ್ ನೋಡಲು ಇಲ್ಲಿ ಕ್ಲಿಕ್ ಮಾಡಿ
3 C. ಅರ್ಹತೆ

ಸ್ಟಾರ್ಟಪ್‌ಗಳನ್ನು ಉದ್ಯಮ ಪ್ರಚಾರ ಮತ್ತು ಆಂತರಿಕ ಮಾರಾಟ ಇಲಾಖೆಯ ಅಡಿಯಲ್ಲಿ ಗುರುತಿಸಲ್ಪಡುವ ಅವಶ್ಯಕತೆ ಇದೆ. ಹೆಚ್ಚು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

5 e. ದುಮ್ಮಾನ ಪರಿಹಾರ

ಯಾವುದೇ ಪ್ರಶ್ನೆಗಳು ಅಥವಾ ಸ್ಪಷ್ಟೀಕರಣಗಳ ಅಗತ್ಯವಿದ್ದಲ್ಲಿ, ದಯವಿಟ್ಟು ಈ ಮೂಲಕ ನಮ್ಮನ್ನು ಸಂಪರ್ಕಿಸಿ ನಮ್ಮನ್ನು ಸಂಪರ್ಕಿಸಿ ಪೇಜ್.

ಉಪಯುಕ್ತ ಲಿಂಕ್‌ಗಳು

ಸ್ಟಾರ್ಟಪ್ ಇಂಡಿಯಾ ಸ್ಕೀಮ್ ಮತ್ತು ಡಿಪಿಐಐಡಿ ಗುರುತಿಸುವಿಕೆ ಬಗ್ಗೆ ಇತ್ತೀಚಿನ ಮಾಹಿತಿಯನ್ನು ಇಲ್ಲಿ ಅಕ್ಸೆಸ್ ಮಾಡಿ