ಭಾರತದಲ್ಲಿ ಉದ್ಯಮವನ್ನು ನಡೆಸುವುದು

1 ಭಾರತದಲ್ಲಿ ಉದ್ಯಮವೊಂದನ್ನು ಆರಂಭಿಸುವುದು

ವ್ಯವಹಾರ ಉದ್ಯಮವು ಲಾಭ ಗಳಿಸಲು ಮತ್ತು ಸಂಪತ್ತನ್ನು ಗಳಿಸಲು ಸಲುವಾಗಿ ಉತ್ಪಾದನೆ ಮತ್ತು/ಅಥವಾ ಸರಕು ಮತ್ತು ಸೇವೆಗಳ ವಿತರಣೆಯಲ್ಲಿ ತೊಡಗಿರುವ ಒಂದು ಆರ್ಥಿಕ ಸಂಸ್ಥೆಯಾಗಿದೆ. ಇದು ಎರಡು ವಿಶಾಲ ವರ್ಗಗಳಾಗಿ ವರ್ಗೀಕರಿಸಬಹುದಾದ ದೊಡ್ಡ ಸಂಖ್ಯೆಯ ಚಟುವಟಿಕೆಗಳನ್ನು ಒಳಗೊಂಡಿದೆ, ಉದಾಹರಣೆಗೆ ಉದ್ಯಮ ಮತ್ತು ವಾಣಿಜ್ಯ. ಪ್ರತಿಯೊಬ್ಬ ವಾಣಿಜ್ಯೋದ್ಯಮಿಯು ವ್ಯವಹಾರವನ್ನು ಆರಂಭಿಸುವ ಮತ್ತು ಯಶಸ್ವಿ ಉದ್ಯಮವಾಗಿ ನಿರ್ಮಿಸುವ ಗುರಿಯನ್ನು ಹೊಂದಿರುತ್ತಾರೆ.

 

ದಿ ಕೈಗಾರಿಕೆಗಳ ನಿರ್ದೇಶನಾಲಯಗಳು ಸಂಬಂಧಪಟ್ಟ ರಾಜ್ಯದಲ್ಲಿ ಕೈಗಾರಿಕಾ ಘಟಕವನ್ನು ಪ್ರಾರಂಭಿಸುವಲ್ಲಿ ಹೊಸ ಉದ್ಯಮಿಗಳಿಗೆ ಸಹಾಯ ಮತ್ತು ಮಾರ್ಗದರ್ಶನ ನೀಡುಲು ವಿವಿಧ ರಾಜ್ಯಗಳಲ್ಲಿ ನಡಲ್ ಏಜೆನ್ಸಿಗಳಿವೆ. ಅವರು ಕೈಗಾರಿಕಾ ಒಳಹರಿವುಗಳಿಗೆ ಉದ್ಯಮ ಮತ್ತು ಇತರ ಏಜೆನ್ಸಿಗಳ ನಡುವಿನ ಸಂಪರ್ಕಸಾಧನವನ್ನು ಒದಗಿಸುತ್ತಾರೆ ಮತ್ತು ಉದ್ಯಮಿಗಳಿಗೆ ವಿವಿಧ ಇಲಾಖೆಗಳಿಂದ ಸಿಂಗಲ್ ಪಾಯಿಂಟ್-ಸಿಂಗಲ್ ವಿಂಡೋದಲ್ಲಿ ಭಿನ್ನ ಕೈಗಾರಿಕಾ ಅನುಮೋದನೆಗಳು ಮತ್ತು ಅನುಮತಿಗಳನ್ನು ಪಡೆಯಲು ಸಹಾಯ ಮಾಡುತ್ತಾರೆ.

2 ಉದ್ಯಮವೊಂದಕ್ಕೆ ಹಣಕಾಸು ನೆರವು

ತನ್ನ ಉದ್ಯಮ ಸಂಸ್ಥೆಗೆ ಸಂಬಂಧಿಸಿದ ಹಲವಾರು ಚಟುವಟಿಕೆಗಳನ್ನು ಕೈಗೊಳ್ಳಲು ಒಬ್ಬ ಉದ್ಯಮಿಗೆ ಅಗತ್ಯವಿರುವ ಹಣ ಮತ್ತು ಹಣಕಾಸಿನ ನೆರವನ್ನು ಉದ್ಯಮ ಫೈನಾನ್ಸ್ ಒದಗಿಸುತ್ತದೆ. ವ್ಯವಹಾರದ ಜೀವನ ಚಕ್ರದ ಪ್ರತಿಯೊಂದು ಹಂತದಲ್ಲಿ ಇದು ಅಗತ್ಯವಾಗಿರುತ್ತದೆ. ಒಂದು ಉದ್ಯಮದ ಅಗತ್ಯವಿರುವ ಬಂಡವಾಳದ ಪ್ರಮಾಣವು ವ್ಯವಹಾರದ ಸ್ವರೂಪ ಮತ್ತು ಗಾತ್ರವನ್ನು ಅವಲಂಬಿಸಿರುತ್ತದೆ, ಆದರೂ ಯಾವುದೇ ಪ್ರಕಾರದ ಕೈಗಾರಿಕಾ ಸ್ಥಾಪನೆಗೆ (ಸಣ್ಣ, ಮಧ್ಯಮ ಅಥವಾ ದೊಡ್ಡ) ಸಮಯಕ್ಕನುಸಾರ ಮತ್ತು ಸಮರ್ಪಕ ಪೂರೈಕೆ ಅನಿವಾರ್ಯವಾಗಿರುತ್ತದೆ. ಭಾರತದ ಆರ್ಥಿಕ ವ್ಯವಸ್ಥೆಯನ್ನು ಹಣ ಮಾರುಕಟ್ಟೆ ಮತ್ತು ಬಂಡವಾಳ ಮಾರುಕಟ್ಟೆ ಎಂದು ವರ್ಗೀಕರಿಸಬಹುದು. ಭಾರತೀಯ ರಿಸರ್ವ್ ಬ್ಯಾಂಕ್ (RBI) ಹಣ ಮಾರುಕಟ್ಟೆಯ ಕಾರ್ಯಾಚರಣೆಯನ್ನು ನಿಯಂತ್ರಿಸುವ ಸರ್ವೋಚ್ಚ ಅಧಿಕಾರವನ್ನು ಹೊಂದಿದೆ, ಆದರೆ ಸೆಕ್ಯುರಿಟೀಸ್ ಆಂಡ್ ಎಕ್ಸ್‌ಚೇಂಜ್ ಬೋರ್ಡ್ (SEBI) ಬಂಡವಾಳ ಮಾರುಕಟ್ಟೆಯ ಕಾರ್ಯಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡುತ್ತದೆ.

ಒಬ್ಬ ಉದ್ಯಮಿ ತನ್ನ ಉದ್ಯಮಕ್ಕೆ ಹಣವನ್ನು ಸಂಗ್ರಹಿಸಲು ಸಾಧ್ಯವಾಗುವ ವ್ಯವಸ್ಥೆಯ ಪ್ರಮುಖ ಘಟಕಗಳು: -

ಎ) ವೆಂಚರ್ ಕ್ಯಾಪಿಟಲ್: ಸಣ್ಣ ಮತ್ತು ಮಧ್ಯಮ ಗಾತ್ರದ ಸಂಸ್ಥೆಗಳಿಗೆ ವೆಂಚರ್ ಕ್ಯಾಪಿಟಲ್ ಪ್ರಮುಖ ಹಣಕಾಸಿನ ಮೂಲವಾಗಿದೆ ವೆಂಚರ್ ಕ್ಯಾಪಿಟಲಿಸ್ಟುಗಳು ವಿವಿಧ ಕ್ಷೇತ್ರಗಳ ವೃತ್ತಿಪರರನ್ನು ಒಳಗೊಂಡಿರುತ್ತಾರೆ. ಅವರು ಯೋಜನೆಗಳನ್ನು ಪರಿಶೀಲನೆ ಮಾಡಿದ ನಂತರ ಈ ಸಂಸ್ಥೆಗಳಿಗೆ ಹಣವನ್ನು (ವೆಂಚರ್ ಕ್ಯಾಪಿಟಲ್ ಫಂಡ್ ಎಂದು ಕರೆಯಲಾಗುತ್ತದೆ) ಒದಗಿಸುತ್ತಾರೆ.

ಬಿ) ಬ್ಯಾಂಕುಗಳು: ಬ್ಯಾಂಕ್ ಎಂಬುದು ಸಾರ್ವಜನಿಕರಿಂದ ಹಣದ ಠೇವಣಿಗಳನ್ನು ಸ್ವೀಕರಿಸುವ ಸಂಸ್ಥೆಯಾಗಿದ್ದು, ಇದರ ಮೂಲಕ ಡಿಮ್ಯಾಂಡಿನಲ್ಲಿ ಮರುಪಾವತಿ ಮಾಡಬಹುದು ಮತ್ತು ಚೆಕ್ ಮೂಲಕ ವಿತ್‌ಡ್ರಾ ಮಾಡಬಹುದು. ಅಂತಹ ಠೇವಣಿಗಳನ್ನು ಇತರರಿಗೆ ಸಾಲ ನೀಡಲು ಮಾತ್ರ ಬಳಸಲಾಗುತ್ತದೆ ಮತ್ತು ತನ್ನ ಸ್ವಂತ ಯಾವುದೇ ರೀತಿಯ ವ್ಯವಹಾರಕ್ಕೆ ಅದನ್ನು ಬಳಸುವುದಿಲ್ಲ. ಸಾಲ ಪದವು ಸಾಲಗಾರರಿಗೆ ನೇರ ಸಾಲ ಮತ್ತು ತೆರೆದ ಮಾರುಕಟ್ಟೆ ಭದ್ರತೆಗಳಲ್ಲಿ ಹೂಡಿಕೆಯ ಮೂಲಕ ಪರೋಕ್ಷ ಸಾಲ ನೀಡುವಿಕೆ ಎರಡನ್ನೂ ಒಳಗೊಂಡಿದೆ. 

ಸಿ) ಸರ್ಕಾರಿ ಯೋಜನೆಗಳು: ಒಬ್ಬ ವಾಣಿಜ್ಯೋದ್ಯಮಿ ತನ್ನ ವ್ಯವಹಾರವನ್ನು ಯಶಸ್ವಿಯಾಗಿ ಸ್ಥಾಪಿಸಲು ಮಾತ್ರವಲ್ಲ, ಯಶಸ್ವಿ ಕಾರ್ಯಾಚರಣೆಗೆ ಮತ್ತು ಕೈಗಾರಿಕಾ ಘಟಕವನ್ನು ನಿಯಮಿತವಾಗಿ ನವೀಕರಿಸುವುದಕ್ಕೆ/ ಆಧುನೀಕರಣಕ್ಕೆ ನಿರಂತರ ಹಣದ ಹರಿವು ಅಗತ್ಯವಿರುತ್ತದೆ. ಈ ಅವಶ್ಯಕತೆಗಳನ್ನು ಪೂರೈಸಲು, ಸರ್ಕಾರಗಳು (ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ) ವಿವಿಧ ನೀತಿಗಳು ಮತ್ತು ಯೋಜನೆಗಳನ್ನು ರಚಿಸುದು ಸೇರಿದಂತೆ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳನ್ನು ಸ್ಥಾಪಿಸುವಂತಹ ಹಲವಾರು ಹಂತಗಳನ್ನು ಕೈಗೊಳ್ಳುತ್ತಿದೆ. ಅಂತಹ ಎಲ್ಲಾ ಕ್ರಮಗಳು ನಿರ್ದಿಷ್ಟವಾಗಿ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಪ್ರಚಾರ ಮತ್ತು ಅಭಿವೃದ್ಧಿಯನ್ನು ಗಮನದಲ್ಲಿ ಇಟ್ಟುಕೊಂಡು ಕೈಗೊಳ್ಳಲಾಗುತ್ತದೆ

ಡಿ) ಬ್ಯಾಂಕಿಂಗೇತರ ಹಣಕಾಸು ಕಂಪನಿಗಳು: ಬ್ಯಾಂಕಿಂಗೇತರ ಹಣಕಾಸು ಕಂಪನಿಗಳು (NBFCS) ಭಾರತೀಯ ಆರ್ಥಿಕ ವ್ಯವಸ್ಥೆಯ ಪ್ರಮುಖ ಭಾಗವಾಗಿ ಬಹಳ ವೇಗವಾಗಿ ಬೆಳೆಯುತ್ತಿವೆ. ಇದು ವಿವಿಧ ವೈವಿಧ್ಯಮಯ ಸಂಸ್ಥೆಗಳ ಗುಂಪಾಗಿದ್ದು (ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳು ಹೊರತುಪಡಿಸಿ), ಇದು ವಿಭಿನ್ನ ಮಾರ್ಗಗಳಲ್ಲಿ ಹಣಕಾಸು ಮಧ್ಯಸ್ಥಿಕೆಗಳನ್ನು ನಿರ್ವಹಿಸುವುದು, ಠೇವಣಿಗಳನ್ನು ಸ್ವೀಕರಿಸುವುದು, ಸಾಲಗಳು ಮತ್ತು ಮುಂಗಡಗಳನ್ನು ಮಾಡುವುದು, ಗುತ್ತಿಗೆ, ಬಾಡಿಗೆ ಖರೀದಿ ಇತ್ಯಾದಿ ಕಾರ್ಯಗಳನ್ನು ನಿರ್ವಹಿಸುತ್ತದೆ. ಅವರು ಸಾರ್ವಜನಿಕರಿಂದ ಹಣವನ್ನು ನೇರವಾಗಿ ಅಥವಾ ಪರೋಕ್ಷವಾಗಿ ಸಂಗ್ರಹಿಸುತ್ತಾರೆ ಮತ್ತು ಅಂತಿಮ ಖರ್ಚುಗಾರರಿಗೆ ಸಾಲವನ್ನು ನೀಡುತ್ತಾರೆ. 

ಇ) ಹಣಕಾಸು ಸಂಸ್ಥೆಗಳು: ಆರ್ಥಿಕತೆಯ ವಿವಿಧ ವಲಯಗಳಿಗೆ ಸೂಕ್ತವಾದ ಸಾಲದ ಪೂರೈಕೆಯನ್ನು ಒದಗಿಸಲು ಭಾರತ ಸರ್ಕಾರವು ದೇಶದಲ್ಲಿ ಆರ್ಥಿಕ ಸಂಸ್ಥೆಗಳ ಸುವ್ಯವಸ್ಥಿತವಾದ ರಚನೆಯನ್ನು ರೂಪಿಸಿದೆ. ಈ ಹಣಕಾಸಿನ ಸಂಸ್ಥೆಗಳನ್ನು ಅವುಗಳ ಕಾರ್ಯಚಟುವಟಿಕೆಗಳ ಭೌಗೋಳಿಕ ವ್ಯಾಪ್ತಿಗೆ ಅನುಗುಣವಾಗಿ ವಿಶಾಲವಾಗಿ ಎಲ್ಲಾ ಭಾರತೀಯ ಸಂಸ್ಥೆಗಳು ಮತ್ತು ರಾಜ್ಯ ಮಟ್ಟದ ಸಂಸ್ಥೆಗಳನ್ನಾಗಿ ವರ್ಗೀಕರಿಸಬಹುದು. ರಾಷ್ಟ್ರೀಯ ಮಟ್ಟದಲ್ಲಿ, ಅವರು ದೀರ್ಘ ಮತ್ತು ಮಧ್ಯಮ ಅವಧಿಯ ಸಾಲಗಳನ್ನು ಸಮಂಜಸವಾದ ಬಡ್ಡಿ ದರದಲ್ಲಿ ಒದಗಿಸುತ್ತಾರೆ. 

3 ವ್ಯವಹಾರಕ್ಕಾಗಿ ಕಾನೂನುಬದ್ಧ ಪರಿಗಣನೆಗಳು

ಕಾನೂನಿನ ಅಂಶಗಳು ಯಾವುದೇ ಒಂದು ದೇಶದ ಯಶಸ್ವಿ ಉದ್ಯಮ ವಾತಾವರಣದ ಅತ್ಯಗತ್ಯವಾದ ಭಾಗವಾಗಿದೆ. ಅವುಗಳು ನೀತಿ ಚೌಕಟ್ಟನ್ನು ಮತ್ತು ಆ ದೇಶದ ಸರ್ಕಾರದ ರಚನೆಯ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತಾರೆ. ಕಂಪನಿಗಳ ಕಾಯಿದೆ, 1956 ಕಾಯಿದೆಯು ಭಾರತದಲ್ಲಿ ಕಂಪನಿಗೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ನಿಯಂತ್ರಿಸುವ ಅತ್ಯಂತ ಪ್ರಮುಖ ಕಾನೂನಾಗಿದೆ. ಕಂಪನಿಯ ರಚನೆಗೆ ಸಂಬಂಧಿಸಿದ ನಿಬಂಧನೆಗಳನ್ನು ಇದು ಒಳಗೊಂಡಿದ್ದು, ಇದರಲ್ಲಿ ನಿರ್ದೇಶಕರು ಮತ್ತು ವ್ಯವಸ್ಥಾಪಕರ ಅಧಿಕಾರಗಳು ಮತ್ತು ಜವಾಬ್ದಾರಿಗಳು, ಬಂಡವಾಳವನ್ನು ಹೆಚ್ಚಿಸುವುದು, ಕಂಪನಿ ಸಭೆಗಳನ್ನು ನಡೆಸುವುದು, ಕಂಪನಿ ಖಾತೆಗಳ ನಿರ್ವಹಣೆ ಮತ್ತು ಆಡಿಟ್, ಕಂಪನಿ ವ್ಯವಹಾರಗಳ ತಪಾಸಣೆ ಮತ್ತು ತನಿಖೆ, ಕಂಪನಿಯ ಪುನರ್ನಿರ್ಮಾಣ ಮತ್ತು ಸಂಯೋಜನೆ ಹಾಗೂ ಕಂಪನಿಯನ್ನು ಮುಚ್ಚುವುದು ಕೂಡ ಸೇರಿವೆ.

ಭಾರತೀಯ ಒಪ್ಪಂದ ಕಾಯಿದೆ, 1872, ಒಂದು ಕಂಪನಿಯ ಎಲ್ಲಾ ವಹಿವಾಟುಗಳನ್ನು ನಿಯಂತ್ರಿಸುವ ಮತ್ತೊಂದು ಶಾಸನವಾಗಿದೆ. ಇದು ಒಪ್ಪಂದಗಳ ರಚನೆ ಮತ್ತು ಜಾರಿಗೊಳಿಸುವಿಕೆಗೆ ಸಂಬಂಧಿಸಿದ ಸಾಮಾನ್ಯ ತತ್ವಗಳನ್ನು ನಿರ್ವಹಿಸುತ್ತದೆ; ಒಪ್ಪಂದ ಮತ್ತು ಕೊಡುಗೆಗಳ ನಿಬಂಧನೆಗಳ ಆಡಳಿತವನ್ನು ನಿಯಂತ್ರಿಸುತ್ತದೆ; ನಷ್ಟ ಪರಿಹಾರ ಮತ್ತು ಭರವಸೆ, ಬೇಲ್ಮೆಂಟ್ ಮತ್ತು ಪ್ಲೆಡ್ಜ್ ಹಾಗೂ ಏಜನ್ಸಿ ಸೇರಿದಂತೆ ವಿವಿಧ ರೀತಿಯ ಒಪ್ಪಂದಗಳು ನಿರ್ವಹಿಸುತ್ತದೆ. ಇದು ಒಪ್ಪಂದದ ಉಲ್ಲಂಘನೆಗೆ ಸಂಬಂಧಿಸಿದ ನಿಬಂಧನೆಗಳನ್ನು ಒಳಗೊಂಡಿದೆ.

ಇತರ ಪ್ರಮುಖ ಕಾನೂನುಗಳು: - 1951 ರ ಕೈಗಾರಿಕೆಗಳು (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯಿದೆ; ಟ್ರೇಡ್ ಯೂನಿಯನ್ಸ್ ಕಾಯಿದೆ; ಕಾಂಪಿಟಿಶನ್ ಕಾಯಿದೆ, 2002; ಮಧ್ಯಸ್ಥಿಕೆ ಮತ್ತು ಸಂಧಾನದ ಕಾಯಿದೆ, 1996; ವಿದೇಶಿ ವಿನಿಮಯ ನಿರ್ವಹಣೆ ಕಾಯಿದೆ (ಫೆಮ), 1999; ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ಕಾನೂನುಗಳು; ಹಾಗೆಯೇ ಕಾರ್ಮಿಕ ಕಲ್ಯಾಣಕ್ಕೆ ಸಂಬಂಧಿಸಿದ ಕಾನೂನುಗಳು.

4 ಭಾರತದಲ್ಲಿ ಉದ್ಯಮದ ತೆರಿಗೆ


ಭಾರತವು ಚೆನ್ನಾಗಿ ಅಭಿವೃದ್ಧಿ ಹೊಂದಿದ ತೆರಿಗೆ ರಚನೆಯನ್ನು ಹೊಂದಿದೆ. ಭಾರತೀಯ ಸಂವಿಧಾನದ ನಿಬಂಧನೆಗಳಿಗೆ ಅನುಗುಣವಾಗಿ ತೆರಿಗೆ ಮತ್ತು ಡ್ಯೂಟಿಗಳನ್ನು ವಿಧಿಸುವ ಅಧಿಕಾರವನ್ನು ಸರಕಾರದ ಮೂರು ಹಂತಗಳಲ್ಲಿ ವಿಂಗಡಿಸಲಾಗಿದೆ. ಕೇಂದ್ರ ಸರ್ಕಾರದ ವಿಧಿಸುವ ಪ್ರಮುಖ ತೆರಿಗೆ/ ಡ್ಯೂಟಿಗಳು ಹೀಗಿವೆ: -

ಎ) ಆದಾಯ ತೆರಿಗೆ (ರಾಜ್ಯ ಸರ್ಕಾರಗಳು ವಿಧಿಸುವ ಕೃಷಿ ಆದಾಯದ ತೆರಿಗೆ ಹೊರತುಪಡಿಸಿ)

ಬಿ) ಕಸ್ಟಮ್ಸ್ ಡ್ಯೂಟಿಗಳು, ಕೇಂದ್ರ ಅಬಕಾರಿ ಮತ್ತು ಮಾರಾಟ ತೆರಿಗೆ ಮತ್ತು

ಸಿ) ಸೇವಾ ತೆರಿಗೆ

ರಾಜ್ಯ ಸರ್ಕಾರಗಳು ವಿಧಿಸುವ ಪ್ರಮುಖ ತೆರಿಗೆಗಳು: -

ಎ) ಮಾರಾಟ ತೆರಿಗೆ (ಸರಕುಗಳ ಅಂತರರಾಜ್ಯ ಮಾರಾಟದ ಮೇಲಿನ ತೆರಿಗೆ),

ಬಿ) ಸ್ಟ್ಯಾಂಪ್ ಡ್ಯೂಟಿ (ಆಸ್ತಿ ವರ್ಗಾವಣೆಯ ಮೇಲಿನ ಡ್ಯೂಟಿ),

ಸಿ) ರಾಜ್ಯದ ಅಬಕಾರಿ (ಮದ್ಯ ತಯಾರಿಕೆಯಲ್ಲಿ ಮೇಲಿನ ಡ್ಯೂಟಿ),

ಡಿ) ಭೂ ಆದಾಯ (ಕೃಷಿ/ಕೃಷಿಯೇತರ ಉದ್ದೇಶಗಳಿಗಾಗಿ ಬಳಸಿದ ಭೂಮಿ ಮೇಲೆ ವಿಧಿಸಲಾಗುವುದು)

ಇ) ಮನರಂಜನೆ ಮೇಲಿನ ಡ್ಯೂಟಿ ಮತ್ತು ವೃತ್ತಿಗಳು & ಕರೆಗಳ ಮೇಲಿನ ತೆರಿಗೆ.

 

ಸ್ಥಳೀಯ ಸಂಸ್ಥೆಗಳಿಗೆ ಇವುಗಳನ್ನು ವಿಧಿಸಲು ಅಧಿಕಾರವಿದೆ: -

ಎ) ಆಸ್ತಿಗಳ ಮೇಲಿನ ತೆರಿಗೆ (ಕಟ್ಟಡಗಳು, ಇತ್ಯಾದಿ),

ಬಿ) ಆಕ್ಟೊಯಿ (ಸ್ಥಳೀಯ ಸಂಸ್ಥೆಗಳ ಪ್ರದೇಶಗಳಲ್ಲಿ ಬಳಕೆ/ಉಪಯೋಗಕ್ಕಾಗಿ ಇರುವ ಸರಕುಗಳ ಪ್ರವೇಶದ ಮೇಲೆ ತೆರಿಗೆ),

ಸಿ) ಮಾರುಕಟ್ಟೆಗಳ ಮೇಲಿನ ತೆರಿಗೆ ಮತ್ತು

ಡಿ) ನೀರು ಸರಬರಾಜು, ಒಳಚರಂಡಿ, ಮುಂತಾದ ಉಪಯುಕ್ತತೆಗಳಿಗೆ ತೆರಿಗೆ/ಬಳಕೆದಾರ ಶುಲ್ಕಗಳು.

 

ಹೆಚ್ಚಿನ ಮಾಹಿತಿಗಾಗಿ, ನೀವು ಇಲ್ಲಿಗೆ ಭೇಟಿ ಕೊಡಿ: -

ಎ) ವ್ಯಕ್ತಿಗಳ ವೈಯುಕ್ತಿಕ ತೆರಿಗೆ - ಲಿಂಕ್

ಬಿ) ಪಾಲುದಾರಿಕೆಗಳ ಮೇಲಿನ ತೆರಿಗೆ - ಲಿಂಕ್

ಸಿ) ನಿಗಮಗಳ ತೆರಿಗೆ - ಲಿಂಕ್

ಡಿ) ಉದ್ಯಮದ ಇತರ ಸ್ವರೂಪಗಳ ತೆರಿಗೆ - ಲಿಂಕ್

ಇ) ಸೇವಾ ತೆರಿಗೆ - ಲಿಂಕ್

ಎಫ್) TDS, TCS, TAN - ಲಿಂಕ್