ಸ್ಟಾರ್ಟಪ್ ಪರಿಸರ ವ್ಯವಸ್ಥೆ

ಉದ್ಯಮಿಗಳ ಸ್ಟಾರ್ಟಪ್‌ಗಳು ವಿವಿಧ ಹಂತಗಳಲ್ಲಿರುತ್ತವೆ ಮತ್ತು ವಿವಿಧ ಬೆಂಬಲ, ಹಣಕಾಸು, ಸಂಶೋಧನೆಯನ್ನು ಹೊಂದಿರುತ್ತವೆ ಸ್ಟಾರ್ಟಪ್‌ ಎಕೋಸಿಸ್ಟಮ್ ಸ್ಥಳಗಳಲ್ಲಿ ಮತ್ತು ಜ್ಞಾನದ ಹಬ್ (ಭೌತಿಕ ಮತ್ತು/ಅಥವಾ ವಾಸ್ತವ) ವ್ಯವಸ್ಥೆಯನ್ನು ರೂಪಿಸುತ್ತವೆ.

ಸ್ಟಾರ್ಟಪ್:

 

 

ಸ್ಟಾರ್ಟಪ್:

ಸ್ಟಾರ್ಟಪ್ ಒಂದು ಹೊಸ ಉದ್ಯಮಶೀಲತಾ ವೆಂಚರ್ ಅಥವಾ ಕಂಪನಿಯಾಗಿದ್ದು, ನವೀನ ಉತ್ಪನ್ನ, ಪ್ರಕ್ರಿಯೆ ಅಥವಾ ಸೇವೆಯನ್ನು ಅಭಿವೃದ್ಧಿಪಡಿಸುವ ಅಥವಾ ನೀಡುವ ಮೂಲಕ ಮಾರುಕಟ್ಟೆಯ ಅವಶ್ಯಕತೆಗಳನ್ನು ಪೂರೈಸುವ ಗುರಿಯನ್ನು ಹೊಂದಿದೆ.

 

ಪೋಷಕ ಸಂಘಟನೆಗಳು:

 

 

    

ಇಂಕ್ಯುಬೇಟರ್‌ಗಳು:

ಇಂಕ್ಯುಬೇಟರ್ ಒಂದು ತಂತ್ರಜ್ಞಾನ/ಮ್ಯಾನೇಜ್ಮೆಂಟ್ ಸ್ಕೂಲ್‌ನಲ್ಲಿರುವ ಸಂಸ್ಥೆಯಾಗಿದ್ದು ಅಥವಾ ಸ್ವತಂತ್ರ ಸೆಟಪ್ ಆಗಿದ್ದು, ಇದು ಆರಂಭಿಕ ಹಂತದ ಸ್ಟಾರ್ಟಪ್‌ಗಳಿಗೆ ಕೆಲಸದ ಸ್ಥಳ, ಮ್ಯಾನೇಜ್ಮೆಂಟ್ ತರಬೇತಿ, ಕ್ಯಾಪ್ಟಿವ್ ಮೆಂಟರ್ ಪೂಲ್, ತಾಂತ್ರಿಕ ಸೇವೆಗಳಿಗೆ ಅಕ್ಸೆಸ್ ಮುಂತಾದ ಸೇವೆಗಳನ್ನು ಒದಗಿಸುವ ಮೂಲಕ ತಮ್ಮ ವ್ಯವಹಾರವನ್ನು ಪ್ರಾರಂಭಿಸಲು ಮತ್ತು ಬೆಳೆಸಲು ಸಹಾಯ ಮಾಡುತ್ತದೆ.

 

ಎಕ್ಸಲರೇಟರ್‌ಗಳು:

ಎಕ್ಸಲರೇಟರ್ ಒಂದು ಸಂಸ್ಥೆಯಾಗಿದ್ದು, ಸ್ವತಂತ್ರ ಸಂಸ್ಥೆ ಅಥವಾ ಕಾರ್ಪೊರೇಟ್ ಕಾರ್ಯಕ್ರಮವಾಗಿದ್ದು, ಇದು ಆರಂಭಿಕ ಹಂತದ ಕಂಪನಿಗಳನ್ನು ತೀವ್ರವಾಗಿ ತಲ್ಲೀನಗೊಳಿಸುವ ಶಿಕ್ಷಣ, ಮಾರ್ಗದರ್ಶನ ಮತ್ತು ಹಣಕಾಸಿನ ಮೂಲಕ ಬೆಂಬಲಿಸುತ್ತದೆ. ಸ್ಟಾರ್ಟಪ್‌ಗಳು ನಿಗದಿತ ಕಾಲಾವಧಿಗಳಿಗೆ ಎಕ್ಸಲರೇಟರನ್ನು ಪ್ರವೇಶಿಸುತ್ತವೆ ಮತ್ತು ತಯಾರಾದ, ದೃಢವಾದ, ಕಂಪನಿಗಳಾಗಿ ಬೆಳೆಯುತ್ತವೆ. ಅದರ ಉದ್ದೇಶವೆಂದರೆ ಪೋರ್ಟ್ ಫೋಲಿಯೋ ಬ್ಯಾಚ್ ಸ್ಟಾರ್ಟಪ್‌ಗಳ ಬೆಳವಣಿಗೆಯನ್ನು ಅಲ್ಪಾವಧಿಯಲ್ಲಿಯೇ ಹೆಚ್ಚಿಸುವುದು ಅದರ ಉದ್ದೇಶವಾಗಿದೆ.

ಮಾರ್ಗದರ್ಶಿಗಳು:

ಮಾರ್ಗದರ್ಶಿಗಳು (ಸಾಮಾನ್ಯವಾಗಿ ಒಂದೇ ಉದ್ಯಮದಿಂದ ಅನುಭವಿ ವ್ಯಕ್ತಿಗಳು) ಕಡಿಮೆ ಅನುಭವಿ ಸ್ಟಾರ್ಟಪ್‌ಗಳಿಗೆ ಉತ್ತಮ ಅಭ್ಯಾಸಗಳು, ನಿರ್ವಹಣಾ ಟೂಲ್‌ಗಳು, ಉದ್ಯಮ ಸಂಪರ್ಕಗಳು, ಇತ್ಯಾದಿಗಳ ಕುರಿತು ಮಾರ್ಗದರ್ಶನ ನೀಡುತ್ತಾರೆ.

 

ಹಣಕಾಸು ಸಂಸ್ಥೆಗಳು:

 

 

ಏಂಜಲ್ ಹೂಡಿಕೆದಾರರು:

ಈ ಎಳೆಯ ಅಥವಾ ಆರಂಭಿಕ ಹಂತದ ಹೂಡಿಕೆದಾರರು ಹೆಚ್ಚು ಅಪಾಯವೆಂದು ಭಾವಿಸಿ ಸಾಮಾನ್ಯವಾಗಿ ಸಣ್ಣ ಪ್ರಮಾಣದ ಹಣವನ್ನು ಹೂಡಿಕೆ ಮಾಡುತ್ತಾರೆ. ಅವರು ಸಾಮಾನ್ಯವಾಗಿ ಶ್ರೀಮಂತ ಅಥವಾ ಹೆಚ್ಚಿನ ನಿವ್ವಳ ಮೌಲ್ಯ ಹೊಂದಿದ ವ್ಯಕ್ತಿಗಳಾಗಿರುತ್ತಾರೆ.

 

ವೆಂಚರ್ ಬಂಡವಾಳದಾರರು/ಖಾಸಗಿ ಷೇರುಗಳು:

ಈ ಕಂಪನಿಗಳು ಸಾಮಾನ್ಯವಾಗಿ ಅಭಿವೃದ್ದಿ ಹೊಂದಿರುವ ಮತ್ತು ಹಳೆಯ ಕಂಪನಿಗಳ ಮೇಲೆ ಹೂಡಿಕೆ ಮಾಡುತ್ತವೆ. ಅವರು ಸಂಸ್ಥೆಗಳು/ವೃತ್ತಿಪರ ಹೂಡಿಕೆದಾರರಾಗಿರುವುದರಿಂದ ಕಾನೂನು, ಅಕೌಂಟಿಂಗ್ ಮತ್ತು ನೆಟ್ವರ್ಕಿಂಗ್ ಬೆಂಬಲವನ್ನು ಸಹ ಒದಗಿಸುತ್ತಾರೆ.

 

ಜ್ಞಾನ:

 

 

ಸಂಪನ್ಮೂಲಗಳು ಮತ್ತು ಟೂಲ್‌ಗಳು:

ಸಂಶೋಧನಾ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಂತಹ ಸಂಸ್ಥೆಗಳು ಸ್ಟಾರ್ಟಪ್‌ಗಳಿಗೆ ವ್ಯಾಪಾರ ಪರಿಭಾಷೆಯನ್ನು ಪರಿಚಯಿಸಲು, ಉದ್ಯಮದ ಒಳನೋಟಗಳನ್ನು ಪಡೆಯಲು, ವ್ಯಾಪಾರ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಕಲಿಯಲು ಮತ್ತು ಹೂಡಿಕೆದಾರರಿಗೆ ಪಿಚ್ ಮಾಡಲು, ಅವರ ಕಾನೂನು ಮತ್ತು ಹಣಕಾಸಿನ ಜ್ಞಾನವನ್ನು ಬಲಪಡಿಸಲು ಸಹಾಯ ಮಾಡುತ್ತವೆ.