ನಾವಿನ್ಯತೆಗೆ ಬೌದ್ಧಿಕ ಆಸ್ತಿ ಹಕ್ಕುಗಳು (ಐಪಿಆರ್‌ಎಸ್) ನಿರ್ಣಾಯಕವಾಗಿರುತ್ತವೆ. ಇದು ಯಾವುದೇ ಜ್ಞಾನ ಆಧಾರಿತ ಅರ್ಥವ್ಯವಸ್ಥೆಯ ಅಡಿಪಾಯವಾಗಿದೆ. ಇದು ಸಂಶೋಧನೆಗಳು ಮತ್ತು ಹಕ್ಕುಗಳ ನಡುವಿನ ಸಂಪರ್ಕ ಸೇತುವೆಯಾಗಿದೆ. ಇದು ಅರ್ಥವ್ಯವಸ್ಥೆಯ ಎಲ್ಲ ವಲಯಗಳನ್ನೂ ಆವರಿಸಿದೆ ಮತ್ತು ಇದು ಸಂಸ್ಥೆಯ ಸ್ಪರ್ಧಾಳುತನವನ್ನು ಖಾತ್ರಿಪಡಿಸುವಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ. ಸಂಶೋಧಕನಿಗೆ ಆತ/ಆಕೆಯ ಶೋಧನೆಯ ಕುರಿತು ರಕ್ಷಣೆ ಮತ್ತು ಬೇರೆಯವರು ಅದನ್ನು ಕಾನೂನುಬಾಹಿರವಾಗಿ ಬಳಸದಂತೆ ತಡೆಯಲು ಅದರ ಪುನರ್ ಶೋಧನೆಯನ್ನು ದೂರವಿಡಲು ಐಪಿಆರ್ ಕಾನೂನು ಹಕ್ಕುಗಳನ್ನು ದಯಪಾಲಿಸುತ್ತದೆ.
ನಾವೀನ್ಯತೆಯನ್ನು ಕಾಪಾಡಲು ಐಪಿಆರ್ ನ ಹಲವಾರು ಸಲಕರಣೆಗಳು ಹೀಗಿವೆ:-
- ಹಕ್ಕುಸ್ವಾಮ್ಯ: ಇದು ಸೃಜನಾತ್ಮಕ ವಿಷಯಗಳಾದ ಸಂಗೀತ, ಸಾಹಿತ್ಯ, ಕಲೆ, ಭಾಷಣ, ನಾಟಕಗಳು, ಕಲೆಯ ಪುನರ್‌ಸೃಷ್ಟಿ, ಮಾದರಿಗಳು, ಫೋಟೋಗಳು, ಕಂಪ್ಯೂಟರ್ ಸಾಫ್ಟ್‌ವೇರ್ ಇತ್ಯಾದಿಗಳನ್ನು ಕಾಪಾಡಲು ಸಂಬಂಧಪಟ್ಟಿದೆ.
- ಪೇಟೆಂಟ್: ಇದು ಆಚರಣೀಯ ನಾವೀನ್ಯತೆಗಳಿಗೆ ಸಂಬಂಧಪಟ್ಟಿದೆ ಮತ್ತು ಶ್ರೇಷ್ಠವಾದ, ಸುಲಭವಲ್ಲದ ಮತ್ತು ಪ್ರಯೋಜನಕಾರಿ ಶೋಧನೆಗಳನ್ನು ಕಾಪಾಡಲು ಉದ್ದೇಶಿಸಿದೆ.
- ಟ್ರೇಡ್‌ಮಾರ್ಕ್: ಇದು ವಾಣಿಜ್ಯ ಚಿಹ್ನೆಗಳಿಗೆ ಸಂಬಂಧಪಟ್ಟಿದೆ ಮತ್ತು ವಿಶಿಷ್ಟ ಗುರುತುಗಳನ್ನು ಕಾಪಾಡುವ ಕಾಳಜಿ ಹೊಂದಿದೆ, ವಿಶಿಷ್ಟ ಗುರುತುಗಳು ಯಾವವುವೆಂದರೆ: ಪದಗಳು/ಚಿಹ್ನೆಗಳು ಮತ್ತು ವೈಯಕ್ತಿಕ ಹೆಸರುಗಳು, ಅಕ್ಷರಗಳು, ಅಂಕೆಗಳು, ಚಿತ್ರಿತ ಅಂಶಗಳು(ಲೋಗೋ); ಉಪಕರಣಗಳು; ಕಣ್ಣಿಂದ ಅರಿಯಬಲ್ಲ ಎರಡು ಅಥವಾ ಮೂರು ಆಯಾಮದ ಚಿಹ್ನೆಗಳು/ಆಕಾರಗಳು ಅಥವಾ ಅವುಗಳ ಸಂಯೋಗಗಳು; ಶ್ರವಣ ಚಿಹ್ನೆಗಳು(ಧ್ವನಿ ಗುರುತುಗಳು) ಉದಾ: ಒಂದು ಪ್ರಾಣಿಯ ಗರ್ಜನೆ ಅಥವಾ ಮಗುವಿನ ನಗುವಿನ ಸದ್ದು; ಮೂಸು ಗುರುತುಗಳು(ವಾಸನೆ ಗುರುತುಗಳು), ಕೆಲವೊಂದು ಸುವಾಸನೆಗಳ ಬಳಕೆ.
- ಕೈಗಾರಿಕೆಯ ವಿನ್ಯಾಸಗಳು: ಇದು ಆಕಾರದ ಶ್ರೇಷ್ಠವಾದ ಕ್ರಿಯೆಯಿಲ್ಲದ ಲಕ್ಷಣಗಳು, ಆಕೃತಿ, ರೂಪಿಕೆ, ಅಲಂಕಾರಿಕ ಅಥವಾ ಗೆರೆ ಅಥವಾ ಬಣ್ಣಗಳ ಸಂಯೋಗದ, ಯಾವುದೇ ಎರಡು ಅಥವಾ ಮೂರು ಆಯಾಮದ ಅಥವಾ ಎರಡೂ ರೂಪಗಳಲ್ಲಿರುವ ವಸ್ತು, ಕೈಗಾರಿಕೆ, ಕೈಯಾರೆ, ಯಾಂತ್ರಿಕ ಅಥವಾ ರಾಸಾಯನಿಕ ಪ್ರಕ್ರಿಯೆಯಿಂದ, ಒಗ್ಗೂಡಿದ ಅಥವಾ ಬೇರೆಬೇರೆಯಾಗಿರುವ, ಪೂರ್ಣಗೊಂಡ ವಸ್ತುವನ್ನು ನೋಡಿ ತೀರ್ಮಾನಿಸಲಾಗುವುದು.
- ಭೌಗೋಳಿಕ ಸಂಕೇತಗಳು (GI): ಇವುಗಳನ್ನು ಕೈಗಾರಿಕೆ ಆಸ್ತಿಯ ಅಂಶಗಳೆಂದು ಪರಿಗಣಿಸಲಾಗುತ್ತದೆ, ಇವು ಉತ್ಪನ್ನವು ಹುಟ್ಟಿದ ದೇಶ ಅಥವಾ ಜಾಗವನ್ನು ಸೂಚಿಸುತ್ತವೆ. ವಿಶೇಷವಾಗಿ, ಇಂತಹ ಹೆಸರೊಂದು ಉತ್ಪನ್ನದ ಗುಣಮಟ್ಟ ಮತ್ತು ವಿಶಿಷ್ಟತೆಗೆ ಭರವಸೆಯನ್ನು ಕೊಡಮಾಡುತ್ತದೆ, ಆ ಉತ್ಪನ್ನವು ನಿರ್ದಿಷ್ಟ ಬೌಗೋಳಿಕ ಪ್ರದೇಶದಿಂದ, ವಲಯದಿಂದ, ದೇಶದಿಂದ ಬಂದಿದೆ ಎಂದು ಸೂಚಿಸುತ್ತದೆ.
ಬೌದ್ಧಿಕ ಆಸ್ತಿ ಹಕ್ಕುಗಳು ಯಾವಾಗಲೂ ಪ್ರಾದೇಶಿಕವಾಗಿರುತ್ತವೆ. ಜಾಗತೀಕರಣ ಮತ್ತು ತಂತ್ರಜ್ಞಾನದ ಹರಿವಿನಿಂದಾಗಿ ಬೌದ್ಧಿಕ ಆಸ್ತಿ ಹಕ್ಕುಗಳ ಪ್ರಾಮುಖ್ಯತೆ ಹೆಚ್ಚಾಗಿದೆ.