ಹಾಯ್, ನಾನು ಸಹರ್ ಮನ್ಸೂರ್, ಬೇರ್ ನೆಸಸಿಟೀಸ್ ಸಂಸ್ಥಾಪಕ ಮತ್ತು ಸಿಇಒ. ಈ ಬ್ಲಾಗ್ ಪೋಸ್ಟ್ ಮೂಲಕ, ನನ್ನ ಉದ್ಯಮಶೀಲತಾ ಪ್ರಯಾಣದಲ್ಲಿ ನನಗೆ ಬೆಂಬಲ ನೀಡುವಲ್ಲಿ ಸ್ಟಾರ್ಟಪ್ ಇಂಡಿಯಾದ ಪಾತ್ರ ಮತ್ತು ನನ್ನ ಕಥೆಯನ್ನು ನಾನು ಹಂಚಿಕೊಳ್ಳಲು ಬಯಸುತ್ತೇನೆ.
ನಾನು ಮೊದಲು ವಾಸ್ತವಾಂಶವನ್ನು ಎದುರಿಸಿದಾಗ, ನಮ್ಮ ಕಸ ತ್ಯಾಜ್ಯ ದೈನಂದಿನ ಬದುಕಿಗೆ ನಕಾರಾತ್ಮಕವಾಗಿ ಪರಿಣಮಿಸುವ ಕಾರಣ ಕೆಲವು ವಸ್ತುಗಳು ನಿರುಪ್ರದಕಾರಕಗಳಾಗಿರುತ್ತವೆ ಎಂದು ನಾನು ನಂಬಿರಲಿಲ್ಲ.
ನಾನು ಸಮಸ್ಯೆಯ ಭಾಗವಾಗಬಾರದು ಎಂದು ನಿರ್ಧರಿಸಿದೆ. ಮೊದಲು ನಾನು ನನ್ನ ಸ್ವಂತ ತ್ಯಾಜ್ಯ ಸಮಸ್ಯೆಯನ್ನು ಪರಿಹರಿಸಬೇಕಾಗಿತ್ತು. ನನ್ನ
ಪರಿಹಾರ - ನಾನು ಪ್ರಾಶಸ್ತ್ಯ ನೀಡುವ ಮೌಲ್ಯಗಳನ್ನು ಪ್ರತಿಬಿಂಬಿಸುವ ಜೀವನಶೈಲಿಯನ್ನು ಅನುಸರಿಸುವುದು.
ಆ ಸಮಯದಲ್ಲಿ ನಾನು ಸುಮಾರು ಆರು ವರ್ಷಗಳ ಕಾಲ ಪರಿಸರ ತಜ್ಞನಾಗಿದ್ದೆ. ನಾನು ಕಾಲೇಜು, ಪದವಿ ಶಾಲೆಯಲ್ಲಿ ಪರಿಸರ ಯೋಜನೆ, ಪರಿಸರ ನೀತಿ ಮತ್ತು ಪರಿಸರ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದ್ದೇನೆ, ಆದರೆ ನನ್ನ ಪರಿಸರ ಮತ್ತು ಸಾಮಾಜಿಕ ನ್ಯಾಯ ಮೌಲ್ಯಗಳಿಗೆ ಇನ್ನಷ್ಟು ಬದ್ಧವಾದ ಜೀವನ ನಡೆಸುವ ಅಗತ್ಯವಿದೆ ಎಂದು ನಾನು ಭಾವಿಸಿದೆ.
ನನ್ನ ಶೂನ್ಯ-ತ್ಯಾಜ್ಯದ ಪ್ರಯಾಣದಲ್ಲಿ, ನಾವು ಭೂಮಿಯನ್ನು ತುಂಬುವ ಉತ್ಪನ್ನಗಳ ಆವಾಸ ಸ್ಥಾನದಲ್ಲಿ ಬದುಕುತ್ತಿದ್ದೇವೆ ಎಂಬುದು ನನಗೆ ಖಾತರಿಯಾಯಿತು.
ಉದಾಹರಣೆಗೆ ಟೂತ್ಬ್ರಶ್ಗಳು- ಪ್ರತಿ ವರ್ಷ ಬಳಕೆ ಮಾಡಿ ಬಿಸಾಕುವ 4.7 ಬಿಲಿಯನ್ನಷ್ಟು ಬ್ರಶ್ಗಳು ಭೂಮಿ ಸೇರುತ್ತವೆ ಮತ್ತು ಮಣ್ಣಲ್ಲಿ ಅದು ಕರಗಿ ಹೋಗಲು 200-700 ವರ್ಷಗಳನ್ನು ತೆಗೆದುಕೊಳ್ಳುತ್ತವೆ. ಆದ್ದರಿಂದ ನೀವು ಮತ್ತು ನಾನು ಉತ್ಪಾದಿಸಿದ ಪ್ರತಿಯೊಂದು ಟೂತ್ಬ್ರಶ್ ನಮ್ಮ ಪ್ಲಾನೆಟ್ನಲ್ಲಿಯೇ ಎಲ್ಲೋ ಒಂದು ಕಡೆ ಹಾಗೆಯೇ ಇರುತ್ತದೆ!
ಈ ಸಮಸ್ಯೆಗೆ ಪರಿಹಾರವಾಗಿ, ಶೂನ್ಯ ತ್ಯಾಜ್ಯ, ಸಾಂಪ್ರದಾಯಿಕ ಬಳಕೆ ಮತ್ತು ಸುಸ್ಥಿರತೆಯ ಮೌಲ್ಯಗಳನ್ನು ಪ್ರತಿಬಿಂಬಿಸುವ ಕಂಪನಿಯನ್ನು ರಚಿಸಲು ನಾನು ಬಯಸಿದ್ದೆನು. ಹೆಚ್ಚು ಜಾಗರೂಕವಾಗಿ ಬಳಕೆ ಮಾಡಲು ಬಯಸುವ ಇತರ ಜನರಿಗೆ ಮತ್ತು ಕಡಿಮೆ ತ್ಯಾಜ್ಯ ಉತ್ಪಾದನೆಗೆ ಪ್ರೋತ್ಸಾಹ ನೀಡಲು ಇತರರಿಗೆ ನಾನು ಇದನ್ನು ಇನ್ನಷ್ಟು ಸುಲಭ ಮತ್ತು ಕೈಗೆಟಕುವಂತೆ ಮಾಡಲು ಬಯಸಿದೆ. ಹೀಗಾಗಿ, ಬೇರ್ ನೆಸಸಿಟೀಸ್ ಅನ್ನು ಹುಟ್ಟುಹಾಕಲಾಯಿತು.
ಬೇರ್ ನೆಸಸಿಟೀಸ್ನಲ್ಲಿ, ಇದು ಕೇವಲ ಉತ್ಪನ್ನಗಳ ಮಾರಾಟದ ಬಗ್ಗೆ ಮಾತ್ರವಲ್ಲ. ಇದು ಭೂ ಸ್ನೇಹಿ ಜೀವನಶೈಲಿಯನ್ನು ಪ್ರೋತ್ಸಾಹಿಸುವ ಬಗೆಗೂ ಆಗಿದೆ.
ದೊಡ್ಡ ಅರ್ಥದಲ್ಲಿ, ಬಿಎನ್ ಭಾರತದಲ್ಲಿ ತ್ಯಾಜ್ಯದ ಬಗೆಗಿನ ದೃಷ್ಟಿಕೋನವನ್ನು ಬದಲಾಯಿಸಲು ಪ್ರಯತ್ನಿಸುತ್ತದೆ. ಭವಿಷ್ಯದಲ್ಲಿ, ಬೇರ್ ನೆಸಸಿಟೀಸ್ ಒಂದು ಅಂತರಶಿಕ್ಷಣ ಕೇಂದ್ರವಾಗಲು, ಉತ್ಪನ್ನಗಳನ್ನು ಕ್ರ್ಯಾಡಲ್ ಟು ಕ್ರ್ಯಾಡಲ್ ಫಿಲಾಸಫಿಯೊಂದಿಗೆ ವಿನ್ಯಾಸಗೊಳಿಸಲು ಉತ್ಪನ್ನ ವಿನ್ಯಾಸಕರಿಗೆ ಕೇಂದ್ರವಾಗಿ, ನಮ್ಮ ತ್ಯಾಜ್ಯವನ್ನು ಕಡಿಮೆ ಮಾಡಲು ನಮ್ಮ ತ್ಯಾಜ್ಯವನ್ನು ಚೆನ್ನಾಗಿ ನಿರ್ವಹಿಸಲು ಶಿಫಾರಸುಗೊಳಿಸಲಾದ ನಿಯಮಗಳ ಮೇಲೆ ಸ್ಥಳೀಯ ಸರ್ಕಾರದೊಂದಿಗೆ ಕೆಲಸ ಮಾಡುವ ಯೋಜನಾ ವಿಶ್ಲೇಷಕರಿಗೆ ಜಾಗವಾಗಲು ಪ್ರಯತ್ನಿಸುತ್ತದೆ.
ಬಿಹೇವಿಯರಲ್ ಅರ್ಥಶಾಸ್ತ್ರಜ್ಞರು, ಪರಿಸರ ತಜ್ಞರು, ಸಂಶೋಧಕರು ಮತ್ತು ಕನ್ಸೂಮರ್ಗಳಿಗೆ ಇರುವ ಸ್ಥಳ. ಹಾಗೆಯೇ
ಪರಿಸರ ವ್ಯವಸ್ಥೆಯನ್ನು ಸರ್ಕ್ಯುಲರ್ ಆರ್ಥಿಕತೆಯತ್ತ ಬೆಳೆಸುವ ಕ್ಷೇತ್ರ.
ಸ್ಟಾರ್ಟಪ್ ಇಂಡಿಯಾವು ವಿವಿಧ ಸ್ಪರ್ಧೆಗಳು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಅವಕಾಶಗಳು ಮತ್ತು ಇನ್ನಷ್ಟು ಅನುಕೂಲಗಳನ್ನು ಒದಗಿಸಲು ಸಹಾಯ ಮಾಡಿದೆ. ಅತ್ಯಂತ ಪ್ರಯೋಜನಕಾರಿಯಾಗಿರುವುದು ಎಂದರೆ:
- ಹಣಕಾಸಿನ ತೊಡಗುವಿಕೆಗಳ ಮೂಲಕ (ನಮ್ಮ ಟ್ರೇಡ್ ಮಾರ್ಕ್ ಸಲ್ಲಿಸುವಾಗ ರಿಯಾಯಿತಿಯಂತಹ) ಪ್ರಯೋಜನ
- ಸ್ಟಾರ್ಟಪ್ ಸ್ಪರ್ಧೆಗಳಾದ (ಸಿಂಗಲ್ ಬಳಕೆ ಪ್ಲಾಸ್ಟಿಕ್ ಸವಾಲು)
- ಅಂತಾರಾಷ್ಟ್ರೀಯ ಸ್ಟಾರ್ಟಪ್ ಅವಕಾಶಗಳು
ಮಾರ್ಚ್ 2020, ಭೂತಾನ್ನಲ್ಲಿ, ಭಾರತ- ಭೂತಾನ್ ಸ್ಟಾರ್ಟಪ್ ಶೃಂಗಸಭೆಗೆ ಹಾಜರಾಗಲು ನಾನು ಸಿಐಐ-ಸ್ಟಾರ್ಟಪ್ ಇಂಡಿಯಾ ನಿಯೋಗದ ಭಾಗವಾಗಲು ಸಾಕಷ್ಟು ಅದೃಷ್ಟಶಾಲಿಯಾಗಿದ್ದೆ.
ಭೂತಾನಿನ ಯುಎನ್ಡಿಪಿ ಮತ್ತು ಚೇಂಬರ್ ಆಫ್ ಕಾಮರ್ಸಿನ ಹಿರಿಯ ನಾಯಕರ ಜತೆಗೆ ಭೂತಾನ್ನ ಪ್ರಧಾನ ಮಂತ್ರಿಗಳಿಂದ ಗ್ರಾಸ್ ಹ್ಯಾಪಿನೆಸ್ ಸೂಚ್ಯಂಕದ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಲು ನಾನು ಅದ್ಭುತ ಅವಕಾಶವನ್ನು ಹೊಂದಿದ್ದೆ. ನಾನು ನುರಿತ ಭೂತಾನಿನ ಉದ್ಯಮಿಗಳನ್ನು ಭೇಟಿಯಾದೆ, ಪ್ರಯಾಣ ಮಾಡಲು ಅವಕಾಶ ದೊರೆಯಿತು ಮತ್ತು ಕೆಲವು ನನ್ನ ಸಹ ಉದ್ಯಮಿಗಳ ಪರಿಚಯವೂ ಆಯಿತು.

ಹೆಚ್ಚುವರಿಯಾಗಿ, ಫಿನ್ಲ್ಯಾಂಡ್ನ ಹೆಲ್ಸಿಂಕಿಯಲ್ಲಿ ಸ್ಲಶ್ಗೆ ಹಾಜರಾಗಲು ನನಗೆ ಅವಕಾಶ ಸಿಕ್ಕಿತು. ಸ್ಲಶ್ ಒಂದು ವಿಶ್ವ ಪ್ರಸಿದ್ಧ ಸ್ಟಾರ್ಟಪ್ ಕಾರ್ಯಕ್ರಮವಾಗಿದೆ! ಸಾವಿರಾರು ಸ್ಟಾರ್ಟಪ್ಗಳು ಮತ್ತು ಹೂಡಿಕೆದಾರರನ್ನು ಒಳಗೊಂಡಂತೆ 20,000 ಕ್ಕೂ ಹೆಚ್ಚು ಬದಲಾವಣೆಯ ಹರಿಕಾರರು ಸೇರಿದ್ದರು.
ಆಂಡ್ರಿಯಾ ಬ್ಯಾರಿಕಾ, ವ್ಯಾಲೆಂಟಿನಾ ಮಿಲನೋವಾ ಮತ್ತು ಸೋಫಿಯಾ ಬೆಂಡ್ಸ್ ಅವರೊಂದಿಗೆ ಕಟ್ಟಳೆಗಳನ್ನು ಮುರಿದು ಮುಂದಿನ ಪೀಳಿಗೆಗಾಗಿ ಭವಿಷ್ಯದ ಕಂಪನಿಗಳನ್ನು ನಿರ್ಮಿಸುವ ಬಗ್ಗೆ ಮಾತನಾಡುವುದು ಸಮಾವೇಶದಲ್ಲಿ ನನ್ನ ಒಂದು ಮೆಚ್ಚಿನ ಭಾಗವಾಗಿತ್ತು!
ಸಂಸ್ಥಾಪಕರ ಫೈರ್ ಸೈಡ್ ಚಾಟ್ಗಳು, ಪ್ಯಾನೆಲ್ ಡಿಸ್ಕಶನ್ ನಡುವೆ ಈ ನೈಟ್ ಕ್ಲಬ್ ಫೀಲ್ ಸಮಾವೇಶ ನಡೆಯಿತು!
ಈ ಅವಕಾಶಕ್ಕಾಗಿ ಧನ್ಯವಾದಗಳು, ಈ ಅವಕಾಶಕ್ಕಾಗಿ ಸ್ಟಾರ್ಟಪ್ ಇಂಡಿಯಾಕ್ಕೆ ಧನ್ಯವಾದಗಳು.

ಸ್ಲಶ್, ನವೆಂಬರ್ 2019 ರಲ್ಲಿ ಸ್ಟಾರ್ಟಪ್ ಇಂಡಿಯಾ ಬೂತ್ನಲ್ಲಿ ಪಿಚಿಂಗ್.

ಕೊನೆಯದಾಗಿ, ಸ್ಟಾರ್ಟಪ್ ಇಂಡಿಯಾ ಆಯೋಜಿಸಿದ ಏಕ ಬಳಕೆಯ ಪ್ಲಾಸ್ಟಿಕ್ ಸವಾಲನ್ನು ಬೇರ್ ನೆಸಸಿಟೀಸ್ ಗೆದ್ದುಕೊಂಡಿತು ಎಂಬುದನ್ನು ನಿಮ್ಮಲ್ಲಿ ಹಂಚಿಕೊಳ್ಳಲು ಬಯಸುತ್ತೇನೆ. ಪ್ಲಾಸ್ಟಿಕ್ ಮಾಲಿನ್ಯವು ಅನೇಕ ವರ್ಷಗಳಿಂದ ಸಾಮಾನ್ಯವಾಗಿ ಕಡೆಗಣಿಸಲ್ಪಟ್ಟ ವಿಷಯವಾಗಿದೆ ಎಂಬುದು ಉತ್ತಮವಾಗಿದೆ. ನಾವು ಪ್ರಸ್ತುತ ನಮ್ಮ ಜೀವಮಾನದ ಅತಿದೊಡ್ಡ ಜಾಗತಿಕ ಕಸದ ಸಂಕಟದಲ್ಲಿ ವಾಸಿಸುತ್ತಿದ್ದೇವೆ. ಇಂತಹ ಪ್ರಮುಖ ಸಮಸ್ಯೆಯ ಸುತ್ತ ಒಂದು ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂಬ ಬಗ್ಗೆ ನನಗೆ ತುಂಬಾ ಸಂತೋಷವಾಗುತ್ತದೆ.
ಹೆಚ್ಚುವರಿಯಾಗಿ ನಮ್ಮನ್ನು ಅಮಿತಿ ವಿಶ್ವವಿದ್ಯಾಲಯದ ಇಂಕ್ಯುಬೇಶನ್ ಲ್ಯಾಬ್ನೊಂದಿಗೆ ಪಿಚ್ ಮಾಡಲು ಆಹ್ವಾನಿಸಲಾಯಿತು.
ಕೊರೋನಾವೈರಸ್ ಜಗತ್ತನ್ನೇ ಆವರಿಸಿಕೊಂಡಿರುವಾಗ, ಹಲವಾರು ಸಣ್ಣ ಉದ್ಯಮಗಳಾದಂತಹ ಬೇರ್ ನೆಸಸಿಟೀಸ್ ಪ್ರಮುಖವಾಗಿ ಈಗ ನಿಮ್ಮ ಬೆಂಬಲವನ್ನು ಬಯಸುತ್ತದೆ. ಕೋವಿಡ್-19 ಅನ್ನು ಹೊಂದಿರುವ ಸದ್ಯದ ಸಂದರ್ಭಗಳಿಂದಾಗಿ ಮಾರಾಟಗಳು ಈಗ ಹಿಂದೆಂದಿಗಿಂತಲೂ ಕಡಿಮೆಯಾಗಿದೆ.
ಆದ್ದರಿಂದ ಇವೆಲ್ಲವನ್ನೂ ಯಾಕೆ ಹೇಳಬೇಕಾಯಿತು? ಈ ದೃಷ್ಟಿಕೋನದಿಂದ ಹೇಳುವುದಾದರೆ, ಈ ಜನರ ಜೀವನವು ಅಪಾಯದಲ್ಲಿದೆ. ಸಣ್ಣ ಬಿಸಿನೆಸ್ಗಳಿಗೆ ಭದ್ರತೆ ಇಲ್ಲದ ಕಾರಣ, ಅಥವಾ ಕೆಲಸಗಾರರಿಗೆ ದೈನಂದಿನ/ ಗಂಟೆಯ ವೇತನದ ಕಾರಣದಿಂದಾಗಿ, ಜವಾಬ್ದಾರಿಯು ಕೇವಲ ವ್ಯವಹಾರದ ಮೇಲಿದೆ.
ನಮ್ಮ ರೀತಿಯ ಅನೇಕ ಸಣ್ಣ ವ್ಯವಹಾರಗಳು ಸಂಪರ್ಕ ಮಾಡದೆಯೇ ವ್ಯವಹಾರವನ್ನು ನಡೆಸಲು ಮಾರ್ಗಗಳನ್ನು ಹುಡುಕುತ್ತಿವೆ ಮತ್ತು ನಮ್ಮದೇ ಆತ್ಮಾವಲೋಕನ ಮತ್ತು ಮರುಶೋಧನೆಗೆ ಪ್ರಯತ್ನಿಸುತ್ತಿವೆ!
ಈ ಸಮಯದಲ್ಲಿ, ನಾವು ಸ್ಟಾರ್ಟಪ್ ಸವಾಲು ನಗದು ಬಹುಮಾನವನ್ನು ಸ್ವೀಕರಿಸಿದ್ದೇವೆ, ಸಂಬಳಗಳನ್ನು ಪಾವತಿಸುವುದು ಮತ್ತು ವಿಸ್ತರಿಸುವುದಕ್ಕಾಗಿ ಇದು ತುಂಬಾ ಸಹಾಯಕವಾಗಿತ್ತು.
ನಮ್ಮ ಪ್ರಯಾಣದಲ್ಲಿ ನಮ್ಮನ್ನು ಅನುಸರಿಸಲು ಬಯಸುವಿರಾ? ಇಲ್ಲಿ ನಮ್ಮನ್ನು ಫಾಲೋ ಮಾಡಿ:
ಇನ್ಸ್ಟಾ: barenecessities_zerowasteindia>
ಫೇಸ್ಬುಕ್: BareNecessitiesZeroWasteIndia
ಟ್ವಿಟರ್: ಬೇರ್_ಜೀರೋವೇಸ್ಟ್
ವೆಬ್ಸೈಟ್: barenecessities.in
ವೆಬ್ಸೈಟ್ಗಳು: https://barenecessities.teachable.com/p/zero-waste-in-30 ; https://barenecessities.in/