ಆಗಾಗ ಕೇಳಲಾದ ಪ್ರಶ್ನೆಗಳು (ಎಫ್ಎಕ್ಯೂಗಳು)

1 ಭಾರತದಲ್ಲಿ ಒಂದು ಎಲ್‌ಎಲ್‌ಪಿಯನ್ನು ಮುಚ್ಚಲು ಸಾಧ್ಯವೇ?

ಹೌದು, ಈ ಕೆಳಗಿನ ಯಾವುದಾದರು ಎರಡು ಮಾರ್ಗಗಳನ್ನು ಅಳವಡಿಸಿಕೊಳ್ಳುವ ಮೂಲಕ ಯಾವುದೇ ಎಲ್‌ಎಲ್‌ಪಿಯು ಭಾರತದಲ್ಲಿ ತನ್ನ ವ್ಯಾಪಾರವನ್ನು ನಿಲ್ಲಿಸಬಹುದು:

1. ಎಲ್‌ಎಲ್‌ಪಿಯನ್ನು ನಿಷ್ಕ್ರಿಯವೆಂದು ಘೋಷಿಸುವುದು: ಒಂದು ವೇಳೆ ಎಲ್‌ಎಲ್‌ಪಿ ತನ್ನ ಬಿಸಿನೆಸ್ ಅನ್ನು ಮುಚ್ಚಲು ಬಯಸಿದರೆ ಅಥವಾ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಯಾವುದೇ ಬಿಸಿನೆಸ್ ಕಾರ್ಯಾಚರಣೆಗಳನ್ನು ನಡೆಸದಿದ್ದರೆ, ಎಲ್‌ಎಲ್‌ಪಿಯನ್ನು ನಿಷ್ಕ್ರಿಯವೆಂದು ಘೋಷಿಸಲು ಮತ್ತು ಎಲ್‌ಎಲ್‌ಪಿಯ ಹೆಸರನ್ನು ಅದರ ನೋಂದಣಿಯಿಂದ ತೆಗೆದುಹಾಕಲು ರಿಜಿಸ್ಟ್ರಾರ್‌ಗೆ ಅಪ್ಲಿಕೇಶನ್ ಸಲ್ಲಿಸಬಹುದು.

2. ಎಲ್‌ಎಲ್‌ಪಿ ಮುಚ್ಚುವಿಕೆ: ವ್ಯವಹಾರದ ಎಲ್ಲಾ ಸ್ವತ್ತುಗಳನ್ನು ಅದರ ಹೊಣೆಗಾರಿಕೆಗಳನ್ನು ಪೂರೈಸಲು ವಿಲೇವಾರಿ ಮಾಡಲಾಗುವ ಪ್ರಕ್ರಿಯೆಯಾಗಿದೆ ಮತ್ತು ಯಾವುದೇ ಹೆಚ್ಚುವರಿ ಹೊಣೆಗಾರಿಕೆಗಳನ್ನು ಮಾಲೀಕರಿಗೆ ವಿತರಿಸಲಾಗುತ್ತದೆ. ಎಲ್‌ಎಲ್‌ಪಿ ಮುಚ್ಚುವಿಕೆಯ ವಿವರಗಳನ್ನು ಈ ಕೆಳಗಿನ ಲಿಂಕ್‌ನಿಂದ ನೋಡಬಹುದು- (http://www.mca.gov.in/LLP/CloseCompany.html) ಎಲ್‌ಎಲ್‌ಪಿಗಳು ಎಲ್‌ಎಲ್‌ಪಿ ಕಾಯ್ದೆ ಮತ್ತು ನಿಯಮಗಳಿಗೆ ಒಳಪಟ್ಟಿರುತ್ತವೆ ಮತ್ತು ಅದನ್ನು ಈ ಕೆಳಗಿನ ಲಿಂಕ್‌ಗಳಿಂದ ನೋಡಬಹುದು (http://www.mca.gov.in/Ministry/actsbills/pdf/LLP_Act_2008_15jan2009.pdf) & (http://www.mca.gov.in/Ministry/pdf/LLPRulesasnotified.pdf) . ಇತ್ತೀಚೆಗೆ ಆರ್‌ಬಿಐ ಎಲ್‌ಎಲ್‌ಪಿಯಲ್ಲಿ ವಿದೇಶಿ ಹೂಡಿಕೆಗೆ ನಿಬಂಧನೆಯನ್ನು ಕೂಡ ಸೂಚಿಸಿದೆ- (http://www.rbi.org.in/scripts/NotificationUser.aspx?Id=8844&Mode=0) ಎಲ್‌ಎಲ್‌ಪಿಗಳು ಮಂಡಳಿಯ ಸಭೆಗಳು, ಎಜಿಎಂ ಇತ್ಯಾದಿಗಳನ್ನು ಹೊಂದಿರಬೇಕಾಗಿಲ್ಲ.

2 ಎಂಸಿಎ ಪೋರ್ಟಲ್‌ನಲ್ಲಿ ಡಿಎಸ್‌ಸಿಯ ನೋಂದಣಿಗಾಗಿ ತಾತ್ಕಾಲಿಕ ಡಿಐಎನ್ ಅನ್ನು ಬಳಸಬಹುದೇ?

ಇಲ್ಲ, ಎಂಸಿಎ ಪೋರ್ಟಲ್‌ನಲ್ಲಿ ಡಿಎಸ್‌ಸಿ ಅನ್ನು ನೋಂದಣಿ ಮಾಡಲು ನಿರ್ದೇಶಕರ ಅನುಮೋದಿತ ಡಿಐಎನ್‌ ಅನ್ನು ಹೊಂದಿರುವುದು ಕಡ್ಡಾಯ.

3 ಭಾರತೀಯ ಕಂಪನಿಗಳ ವಿದೇಶಿ ನಿರ್ದೇಶಕರು ಎಂಸಿಎ ಪೋರ್ಟಲ್‌ನಲ್ಲಿ ತಮ್ಮ ಡಿಎಸ್‌ಸಿ ಹೇಗೆ ನೋಂದಣಿ ಮಾಡುತ್ತಾರೆ?

ವಿದೇಶಿ ನಿರ್ದೇಶಕರು ಭಾರತೀಯ ಪ್ರಮಾಣೀಕರಣ ಪ್ರಾಧಿಕಾರದಿಂದ ಡಿಜಿಟಲ್ ಸಿಗ್ನೇಚರ್ ಪ್ರಮಾಣಪತ್ರವನ್ನು ಪಡೆಯಬೇಕಾಗುತ್ತದೆ (ಪ್ರಮಾಣೀಕರಿಸುವ ಅಧಿಕಾರಿಗಳ ಪಟ್ಟಿ ಎಂಸಿಎ ಪೋರ್ಟಲ್‌ನಲ್ಲಿ ಲಭ್ಯವಿದೆ). ಇತರರಿಗೆ ಅನ್ವಯಿಸುವಂತೆಯೇ ಡಿಎಸ್‌ಸಿ ನೋಂದಣಿ ಪ್ರಕ್ರಿಯೆಯು ನಡೆಯುತ್ತದೆ.

4 ಎಲ್‌ಎಲ್‌ಪಿಯ ರಚನೆಗೆ ಅನುಮೋದಿತ ಹೆಸರು ಪಡೆಯಲು ಎಷ್ಟು ಅವಧಿ ಬೇಕಾಗುತ್ತದೆ? ಅಥವಾ ಎಲ್‌ಎಲ್‌ಪಿ ಅನುಮೋದಿತ ಹೆಸರಿನ ಮಾನ್ಯತೆಯ ಅವಧಿ ಎಷ್ಟು?

ಎಲ್ಎಲ್‌ಪಿ ಅಂಗೀಕೃತ ಹೆಸರು ಅದನ್ನು ಅಂಗೀಕರಿಸಲಾದ ದಿನಾಂಕದಿಂದ 3 ತಿಂಗಳ ಸಮಯದವರೆಗೆ ಮಾನ್ಯವಾಗಿರುತ್ತದೆ. ಆ ಅವಧಿಯೊಳಗೆ ಪ್ರಸ್ತಾಪಿಸಿದ ಎಲ್‌ಎಲ್‌ಪಿಯನ್ನು ಬಳಸದಿದ್ದರೆ, ಆ ಹೆಸರು ರದ್ದಾಗುತ್ತದೆ ಹಾಗೂ ಅದು ಇತರ ಅರ್ಜಿದಾರರಿಗೆ/ಎಲ್‌ಎಲ್‌ಪಿಗೆ ಲಭ್ಯವಿರುತ್ತದೆ. ಹೆಸರನ್ನು ನವೀಕರಿಸಲು ಯಾವುದೇ ವ್ಯವಸ್ಥೆಗಳು ಇರುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.

5 ಹೊಸ ಪಾಲುದಾರರ ನೇಮಕ/ ಎಲ್‌ಎಲ್‌ಪಿಯ ಅಸ್ತಿತ್ವದಲ್ಲಿರುವ ಪಾಲುದಾರರು ರಾಜೀನಾಮೆ ನೀಡುವ ಸಂದರ್ಭದಲ್ಲಿ ರಿಜಿಸ್ಟ್ರಾರ್‌ಗೆ ಯಾವ ಫಾರ್ಮ್ ಅನ್ನು ಸಲ್ಲಿಸಬೇಕಾಗುತ್ತದೆ?

ಇ-ಫಾರ್ಮ್ 3 ಮತ್ತು ಇ-ಫಾರ್ಮ್ 4 ಅನ್ನು ಹೊಸ ನೇಮಕಾತಿ ಮತ್ತು ಅಸ್ತಿತ್ವದಲ್ಲಿರುವ ಪಾಲುದಾರರ ರಾಜೀನಾಮೆ ಕೊಟ್ಟು, ಅಂತಹ ಸಮಾಪ್ತಿ ಅಥವಾ ನೇಮಕಾತಿಯ ಮೂವತ್ತು ದಿನಗಳಲ್ಲಿ ಹೆಚ್ಚುವರಿ ಶುಲ್ಕವಿಲ್ಲದೆ ಮತ್ತು ಮೂವತ್ತು ದಿನಗಳ ನಂತರ ಹೆಚ್ಚುವರಿ ಶುಲ್ಕದೊಂದಿಗೆ ಸಲ್ಲಿಸಬೇಕಾಗುತ್ತದೆ.

6 ಕಂಪನಿಯ ನೋಂದಾವಣೆಗೆ ಮೊದಲೇ ಹೆಸರನ್ನು ಕಾಯ್ದಿರಿಸುವುದು ಹೇಗೆ?

ಎಸ್‌ಪಿಐಸಿಇ (ಐಎನ್‌ಸಿ-32) ಅನ್ನು ಸಲ್ಲಿಸುವ ಮೊದಲು ಹೆಸರನ್ನು ಕಾಯ್ದಿರಿಸಲು, ನೀವು ಐಎನ್‌ಸಿ- 1 (ಇದರಲ್ಲಿ ಗರಿಷ್ಠ 6 ಹೆಸರುಗಳನ್ನು ಪ್ರಸ್ತಾಪಿಸಬಹುದು) ಅನ್ನು ಬಳಸಬಹುದು, ನಂತರ ಅನುಮೋದಿತ ಐಎನ್‌ಸಿ-1 ರ ಎಸ್‌ಆರ್‌ಎನ್‌ ಅನ್ನು ಎಸ್‌ಪಿಐಸಿಇ ಅಲ್ಲಿ ಸೇರಿಸಬಹುದು.