ಆ್ಯಕ್ಷನ್ ಪ್ಲಾನ್ ಮತ್ತು ಸ್ಟೇಟಸ್ ರಿಪೋರ್ಟ್
ಸ್ಟಾರ್ಟಪ್ ಇಂಡಿಯಾ ಭಾರತ ಸರಕಾರದ ಒಂದು ಹೆಗ್ಗಳಿಕೆಯ ತೊಡಗಿಕೆ ಆಗಿದ್ದು ಇದು ದೇಶದಲ್ಲಿ ನಾವೀನ್ಯತೆ ಮತ್ತು ಸ್ಟಾರ್ಟಪ್‌ಗಾಗಿ ಗಟ್ಟಿಯಾದ ಪರಿಸರ ಕಟ್ಟುವುದು ಮತ್ತು ಇದರ ಮೂಲಕ ದೀರ್ಘಾವಧಿ ತಾಳುವ ಆರ್ಥಿಕ ಬೆಳವಣಿಗೆಯನ್ನು ಹಾಗೂ ದೊಡ್ಡ ಮಟ್ಟದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವುದು ಇದರ ಉದ್ದೇಶವಾಗಿದೆ. ಈ ಉಪಕ್ರಮದ ಮೂಲಕ ಸರ್ಕಾರವು ಹೊಸತನ ಮತ್ತು ವಿನ್ಯಾಸದ ಮೂಲಕ ಸ್ಟಾರ್ಟಪ್‌ಗಳನ್ನು ಬೆಳೆಸುವ ಸಾಮರ್ಥ್ಯವನ್ನು ಹೊಂದಿದೆ.
ಈ ತೊಡಗಿಕೆಯ ಗುರಿಗಳನ್ನು ಪೂರೈಸುವ ಸಲುವಾಗಿ, ಭಾರತ ಸರ್ಕಾರ 2016 ರ ಜನವರಿ 16 ರಂದು ಸ್ಟಾರ್ಟಪ್ ಪರಿಸರ ವ್ಯವಸ್ಥೆಯ ಎಲ್ಲಾ ಅಂಶಗಳನ್ನು ಉದ್ದೇಶಿಸಿರುವ ಆ್ಯಕ್ಷನ್ ಪ್ಲಾನನ್ನು ಘೋಷಿಸಿತು. ಈ ಆ್ಯಕ್ಷನ್ ಪ್ಲಾನಿನೊಂದಿಗೆ, ಸ್ಟಾರ್ಟಪ್ ಪ್ರಕ್ರಿಯೆಯ ಹರಡುವಿಕೆಯನ್ನು ವೇಗಗೊಳಿಸಲು ಸರ್ಕಾರವು ಆಶಿಸುತ್ತಿದೆ. ಆ್ಯಕ್ಷನ್ ಪ್ಲಾನ್ ಈ ಕೆಳಗಿನ 3 ಘಟಕಗಳನ್ನು ಆಧರಿಸಿದೆ:
- ಸರಳೀಕರಣ ಮತ್ತು ಬೆಂಬಲ
- ಫಂಡಿಂಗ್ ಬೆಂಬಲ ಮತ್ತು ಪ್ರೋತ್ಸಾಹಧನಗಳು
- ಉದ್ಯಮ-ಅಕಾಡೆಮಿ ಪಾಲುದಾರಿಕೆ ಮತ್ತು ಇಂಕ್ಯುಬೇಶನ್
