▲
'ಸ್ಟಾರ್ಟಪ್ ಇಂಡಿಯಾ ಕಲಿಕಾ ಕಾರ್ಯಕ್ರಮ' ಒಂದು ಉಚಿತ ಆನ್ಲೈನ್ ಉದ್ಯಮಶೀಲತೆ ಕಾರ್ಯಕ್ರಮವಾಗಿದ್ದು ಭಾರತ ಸರ್ಕಾರದ ಮುಂದಾಳತ್ವದಲ್ಲಿರುವ 'ಸ್ಟಾರ್ಟಪ್ ಇಂಡಿಯಾ' ಇವರಿಂದ ನಡೆಸಲ್ಪಡುತ್ತಿದೆ. ಈ ಕಾರ್ಯಕ್ರಮವನ್ನು ಇನ್ವೆಸ್ಟ್ ಇಂಡಿಯಾ ಅವರು ಅಪ್‌ಗ್ರ್ಯಾಡ್ ಅವರ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದ್ದಾರೆ. ರಚನಾತ್ಮಕ ಕಲಿಕೆಯ ಮೂಲಕ ಉದ್ಯಮಿಗಳು ತಮ್ಮ ಕಲ್ಪನೆಗಳನ್ನು ಮತ್ತು ವೆಂಚರ್‌ಗಳನ್ನು ಇನ್ನೂ ಮೇಲಿನ ಹಂತಕ್ಕೆ ಕೊಂಡೊಯ್ಯಲು ನೆರವು ನೀಡುವ ಗುರಿ ಹೊಂದಲಾಗಿದೆ. ಈ ಕಾರ್ಯಕ್ರದಲ್ಲಿ 40+ ಶ್ರೇಷ್ಠ ಸಂಸ್ಥಾಪಕರು 4 ವಾರಗಳಷ್ಟು ದೀರ್ಘ ಕಾಲಾವಧಿಯಲ್ಲಿ ಸ್ಟಾರ್ಟಪ್ ಮಾಡಲು ತಿಳಿಯಬೇಕಾದ ಬಹುಮುಖ್ಯ ಕ್ಷೇತ್ರಗಳು ಎಂಬುದರ ಬಗ್ಗೆ ಪಾಠ ಮಾಡಲಿದ್ದಾರೆ.
ಭಾರತದ ಬೇರೆಬೇರೆ ವಲಯಗಳ ಮೆಲ್ಮಟ್ಟದ ಉದ್ಯಮಿಗಳಿಂದ ಅವರ ಸೋಲು-ಗೆಲುವುಗಳ ಬಗ್ಗೆ ತಿಳಿಯಿರಿ
ಸ್ಟಾರ್ಟಪ್ ಇಂಡಿಯಾ ಮಾತ್ತು ಇನ್ವೆಸ್ಟ್ ಇಂಡಿಯಾದ ಅಧಿಕೃತ ಪ್ರಮಾಣೀಕರಣವನ್ನು ಪಡೆಯಿರಿ
ನಿಮ್ಮ ಕಲಿಸುವಿಕೆಯ ಭಾಷಾ ಮಾಧ್ಯಮವಾಗಿ ಹಿಂದಿ ಅಥವಾ ಇಂಗ್ಲಿಷನ್ನು ಆಯ್ದುಕೊಳ್ಳಿ
ಸಂವಾದಾತ್ಮಕ ಚರ್ಚೆಯ ಫೋರಂನಲ್ಲಿ ಇತರ ಉದ್ಯಮಿಗಳ ಜತೆಗೆ ಮಾತನಾಡಿ
ನಿಮ್ಮ ಉದ್ಯಮಕ್ಕೆ ವ್ಯವಹಾರ ಯೋಜನೆಯನ್ನು ರಚಿಸಲು ಹಂತವಾರು ಮಾಹಿತಿ ಪಡೆಯಿರಿ
ನಿಮ ಆಲೋಚನೆಗಳನ್ನು ಗುರುತಿಸಿ ಮತ್ತು ನಿಮ್ಮ ಸಂಭಾವ್ಯ ಗ್ರಾಹಕರು ಹಾಗೂ ಮಾರುಕಟ್ಟೆ ಪರಿಸರವನ್ನು ದೃಷ್ಟಿಯಲ್ಲಿರಿಸಿಕೊಂಡು ಅದನ್ನು ನಿರ್ಣಯಿಸಿ
ನಿಮ್ಮ ಕಂಪನಿಗೆ ಸರಿಯಾದ ಕಾನೂನು ಅಡಿಪಾಯವೊಂದನ್ನು ವ್ಯಾಖ್ಯಾನಿಸಿ ಮತ್ತು ಮೂಲಭೂತ ವಿಷಯಗಳಾದ ಕಂಪನಿ ನೋಂದಣಿ, ಪಾಲಿಸಬೇಕಾದವುಗಳು, ಪೇಟೆಂಟ್‌ಗಳು ಇತ್ಯಾದಿಗಳನ್ನು ತಿಳಿದುಕೊಳ್ಳಿ.
ಹಣಕಾಸಿನ ಸ್ಟೇಟ್ಮೆಂಟ್‌ಗಳು, ಬ್ರೇಕ್-ಈವನ್ ವಿಶ್ಲೇಷಣೆ ಇತ್ಯಾದಿಗಳ ಹಣಕಾಸು ಮತ್ತು ಅಕೌಂಟಿಂಗ್ ಮೂಲಭೂತ ಅಂಶಗಳನ್ನು ಅರ್ಥಮಾಡಿಕೊಳ್ಳಿ.
ನಿಮ್ಮ ವೆಂಚರಿಗಾಗಿ ಒಂದು ಪರಿಣಾಮಕಾರಿ ಉದ್ಯಮವನ್ನು ಹೇಗೆ ನಿರ್ಮಿಸುವುದು ಎಂದು ತಿಳಿಯಿರಿ
ಕಂಪನಿಯ ಮೌಲ್ಯಮಾಪನ, ನಿಧಿ ಸಂಗ್ರಹಣೆ, ಇತರ ವಿಷಯಗಳ ಪೈಕಿ ಇಕ್ವಿಟಿ ದುರ್ಬಲಗೊಳಿಸುವುದು ಮುಂತಾದ ವಿಷಯಗಳ ಬಗ್ಗೆ ಹೂಡಿಕೆದಾರರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಿ
ಹೂಡಿಕೆದಾರರಿಗೆ ನಿಮ್ಮ ಕಂಪನಿಯನ್ನು ಹೇಗೆ ಪಿಚ್ ಮಾಡುವುದು ಮತ್ತು ಟರ್ಮ್‌ಶೀಟ್‌ಗಳಲ್ಲಿ ಪ್ರಮುಖ ಗಮನಹರಿಸುವ ಪ್ರದೇಶಗಳನ್ನು ಗುರುತಿಸುವುದು ಹೇಗೆಂದು ತಿಳಿಯಿರಿ
ಉತ್ತಮ ಬೋಧಕವರ್ಗ ಮತ್ತು ಉದ್ಯಮ ಪಾಲ್ಗೊಳ್ಳುಗರ ಪರಿಕಲ್ಪನೆಗಳು ಮತ್ತು ಚೌಕಟ್ಟುಗಳು

"ನಾನು ಸುಮಾರು ವರ್ಷಗಳ ಹಿಂದೆ ನನ್ನ ಔದ್ಯಮಿಕ ಪ್ರಯಾಣವನ್ನು ಆರಂಭಿಸಿದೆ, ಆಗ ಸ್ಟಾರ್ಟಪ್ ಯಶಸ್ಸಿನ ಕಥೆಗಳು ಬಹಳ ಅಪರೂಪ. ಇಂದು, ನಾವು ನಮ್ಮ ದೇಶದ ಆರ್ಥಿಕ ಮತ್ತು ವ್ಯವಹಾರ ಇತಿಹಾಸದಲ್ಲಿನ ಸ್ವಲ್ಪ ವಿಶೇಷವಾದ, ಅಸಾಧಾರಣ ಯುಗವನ್ನು ಕಾಣುತ್ತಿದ್ದೇವೆ. ಫ್ಲಿಪ್‌ಕಾರ್ಟ್, ಸ್ನ್ಯಾಪ್‌ಡೀಲ್ ಮತ್ತು ಜೊಮಾಟೊವಿನ ಯಶಸ್ಸಿನ ಕಥೆಗಳ ಔದ್ಯಮಿಕ ಸ್ಪೂರ್ತಿಯಿಂದ ಕೆಲವು ಉದ್ಯಮಗಳು ಈ ದೇಶದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಅನಾವರಣಗೊಂಡಿವೆ. ಈ ಔದ್ಯಮಿಕ ಮನೋಭಾವ ಪ್ರಜ್ವಲಿಸುವಂತೆ ನೆರವಾಗಲು, ಜಿಒಐ ನ ಸ್ಟಾರ್ಟಪ್ ಇಂಡಿಯಾ ತೊಡಗುವಿಕೆಯ ಇನ್ವೆಸ್ಟ್ ಇಂಡಿಯಾ ಜೊತೆ ನಾವು ಒಪ್ಪಂದ ಮಾಡಿಕೊಂಡಿದ್ದೇವೆ ಮತ್ತು ಸ್ಟಾರ್ಟಪ್ ಇಂಡಿಯಾ ಲರ್ನಿಂಗ್ ಪ್ರೋಗ್ರಾಂ ಎನ್ನುವ ಉಚಿತ ಪ್ರೋಗ್ರಾಂ ಅನ್ನು ಉದ್ಯಮಶೀಲತೆಯಲ್ಲಿ ಆರಂಭಿಸಿದ್ದೇವೆ."
ಪ್ರೊಗ್ರಾಮಿಗೆ ಒಂದು ಅಕೌಂಟನ್ನು ರಚಿಸಲು ದಯವಿಟ್ಟು ''ಇಂಗ್ಲಿಷ್ ಪ್ರೊಗ್ರಾಮ್'' ಅಥವಾ ''ಹಿಂದಿ ಪ್ರೊಗ್ರಾಮ್'' ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ವಿವರಗಳನ್ನು ನಮೂದಿಸಿ ನಿಮ್ಮನ್ನು ನೋಂದಣಿ ಮಾಡಿಕೊಳ್ಳಿ (ಹೆಸರು, ಇಮೇಲ್ ಐಡಿ ಮತ್ತು ಫೋನ್ ನಂಬರ್). ಒಂದು ಪಾಸ್ವರ್ಡನ್ನು ಆಯ್ಕೆ ಮಾಡಿ ಮತ್ತು ಅಕೌಂಟನ್ನು ರಚಿಸಲು ಸೈನಪ್ ಬಟನ್ ಮೇಲೆ ಕ್ಲಿಕ್ ಮಾಡಿ.
ಒಂದು ವೇಳೆ ನೀವು ಪಾಸ್ವರ್ಡ್ ಕಳೆದುಕೊಂಡರೆ, ''ಪಾಸ್ವರ್ಡ್ ಕಳೆದಿದೆ'' ಲಿಂಕ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ನೋಂದಾಯಿತ ಇಮೇಲ್ ಐಡಿಯನ್ನು ಒದಗಿಸಿ ಮತ್ತು ''ಒಟಿಪಿ ಪಡೆಯಿರಿ'' ಕ್ಲಿಕ್ ಮಾಡಿ. ನೀವು ನಿಮ್ಮ ನೋಂದಾಯಿತ ಇಮೇಲ್ ಐಡಿಗೆ ಪಾಸ್ವರ್ಡನ್ನು ಹೇಗೆ ರಚಿಸುವುದು ಎಂಬ ತಿಳುವಳಿಕೆಯ ಜತೆಗೆ ಒಟಿಪಿಯನ್ನು ಪಡೆಯುತ್ತೀರಿ.
ಈ ವೇದಿಕೆಯನ್ನು ಬಳಸಲು ನೀವು ನಂಬಿಗಸ್ಥ ಇಂಟರ್ನೆಟ್ ಕನೆಕ್ಷನ್ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಿ, ಅದರ ಕನಿಷ್ಠ ವೇಗ 2 mbps ಇರಬೇಕು.
ಈ ವೇದಿಕೆಯು ವಿಂಡೋಸ್ ಎಕ್ಸ್‌ಪಿ ಅಥವಾ ಹೆಚ್ಚಿನ ಇನ್‌ಸ್ಟಾಲ್ ಮಾಡಿದ ವ್ಯವಸ್ಥೆಗಳಲ್ಲಿ ಚೆನ್ನಾಗಿ ಕೆಲಸ ಮಾಡುತ್ತದೆ. ಮ್ಯಾಕ್ ಬಳಕೆದಾರರಿಗೆ, ನೀವು ಇತ್ತೀಚಿನ ಅಪ್ಡೇಟ್‌ಗಳೊಂದಿಗೆ ಒಎಸ್ X 10.9 ಅಥವಾ ಅದಕ್ಕಿಂತ ಹೆಚ್ಚಿನದನ್ನು ಹೊಂದಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಈ ವೇದಿಕೆಗೆ ಕನಿಷ್ಠ 976px ವ್ಯಾಪ್ತಿಯ ಸ್ಕ್ರೀನ್ ಗಾತ್ರದ ಅಗತ್ಯವಿದೆ, ಆದರೆ ನಾವು 1024px ಅಥವಾ ಅದಕ್ಕಿಂತ ಹೆಚ್ಚಿನ ಬಳಸಲು ಶಿಫಾರಸು ಮಾಡುತ್ತೇವೆ. ಮೊಬೈಲ್ ಬ್ರೌಸರ್‌ಗಳನ್ನು ಬೆಂಬಲಿಸುವುದಿಲ್ಲ. ಆದಾಗ್ಯೂ, ನೀವು ಮೊಬೈಲ್‌ನಲ್ಲಿ ಕಾರ್ಯಕ್ರಮವನ್ನು ಅಕ್ಸೆಸ್ ಮಾಡಲು ಬಯಸಿದರೆ, ದಯವಿಟ್ಟು ಆ್ಯಪನ್ನು ಡೌನ್ಲೋಡ್ ಮಾಡಿ ಪ್ಲೇ ಸ್ಟೋರ್.
ನಿಮ್ಮ ಡಿವೈಸಿನಲ್ಲಿ ಯಾವುದೇ ಹೆಚ್ಚುವರಿ ಸಾಫ್ಟ್‌ವೇರ್ ಇನ್ಸ್ಟಾಲ್ ಮಾಡುವ ಅವಶ್ಯಕತೆ ಇಲ್ಲ. ಬರೀ ನಿಮ್ಮ ಅಕೌಂಟಿಗೆ ಲಾಗಿನ್ ಮಾಡಿ ಮತ್ತು ಕಲಿಯಲು ತೊಡಗಿ. ಆದರೆ ನೀವು ಪೂರ್ಣ ಅನುಭವ ಪಡೆಯಲು ಗೂಗಲ್ ಕ್ರೋಮಿನ ಇತ್ತೀಚಿನ ವರ್ಷನ್ ಬಳಸಬೇಕು.
ಈ ಕೆಳಗಿನಂತೆ ಮಾಡಿ:
1. ನಿಮ್ಮ ಬ್ರೌಸರ್ ರಿಫ್ರೆಶ್ ಮಾಡಿ.
2. ಇಂಟರ್ನೆಟ್ ಕನೆಕ್ಷನ್ ಮತ್ತು ಅದರ ವೇಗವನ್ನು ಪರೀಕ್ಷಿಸಿ.
3. ನಿಮ್ಮ ಬ್ರೌಸರನ್ನು ತೊರೆಯಿರಿ ಮತ್ತು ಮತ್ತೊಮ್ಮೆ ತೆರೆಯಿರಿ.
4. ಲಾಗೌಟ್ ಮಾಡಿ ಮತ್ತು ಮತ್ತೆ ಲಾಗಿನ್ ಮಾಡಿ.
5. ಬೇರೆ ಬ್ರೌಸರ್ ಬಳಸಲು ಪ್ರಯತ್ನಿಸಿ.
ನಿಮ್ಮ ಡಿವೈಸಿನಲ್ಲಿ ವಿಡಿಯೋಗಳನ್ನು ಡೌನ್ಲೋಡ್ ಮಾಡಲಾಗುವುದಿಲ್ಲ.
ಚಿಂತೆ ಬೇಡ. ನಿಮ್ಮ ಪ್ರಗತಿ ಸೇವ್ ಆಗಿದೆ. ಇಂಟರ್ನೆಟ್ ಕನೆಕ್ಷನ್ ಬಂದ ಕೂಡಲೇ ನೀವು ಎಲ್ಲಿ ಬಿಟ್ಟಿರುವಿರೋ ಅಲ್ಲಿಂದ ನೋಡಲು ಮುಂದುವರಿಯಬಹುದು.
ಹೌದು. ನೀವು ಸ್ಟಾರ್ಟಪ್ ಇಂಡಿಯಾ ಲರ್ನಿಂಗ್ ಪ್ರೋಗ್ರಾಂ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು ಪ್ಲೇ ಸ್ಟೋರ್.
ನಿಮ್ಮ ಪಾಸ್ವರ್ಡ್ ಕನಿಷ್ಟ ಇವುಗಳನ್ನು ಒಳಗೊಂಡಿರಬೇಕು:
* ನಿಮ್ಮ ಪಾಸ್ವರ್ಡ್ ಕನಿಷ್ಟ ಇವುಗಳನ್ನು ಒಳಗೊಂಡಿರಬೇಕು:
ಇದನ್ನು ಆಕ್ಸೆಸ್ ಮಾಡಲು ನಿಮ್ಮ ಪ್ರೊಫೈಲನ್ನು ಪೂರ್ಣಗೊಳಿಸಿ.
ಭಾರತದ ಸ್ಟಾರ್ಟಪ್ ಎಕೋಸಿಸ್ಟಮಿನಲ್ಲಿರುವ ಎಲ್ಲಾ ಷೇರುದಾರರಿಗೆ ಸ್ಟಾರ್ಟಪ್ ಇಂಡಿಯಾ ಪೋರ್ಟಲ್ ಒಂದು ಬಗೆಯ ಆನ್ಲೈನ್ ವೇದಿಕೆಯಾಗಿದೆ.


ನಿಮ್ಮ ಗುಪ್ತಪದವನ್ನು ಮರೆತಿರಾ
ದಯವಿಟ್ಟು ನಿಮ್ಮ ಇಮೇಲ್ ಐಡಿಗೆ ಕಳುಹಿಸಲಾದ ಒಟಿಪಿ ಪಾಸ್ವರ್ಡನ್ನು ನಮೂದಿಸಿ
ದಯವಿಟ್ಟು ನಿಮ್ಮ ಪಾಸ್ವರ್ಡ್ ಬದಲಿಸಿ


